ಫೆ.11,12: ಇಂಧನ ಸಚಿವರ ಪ್ರವಾಸ ಕಾರ್ಯಕ್ರಮ

ಉಡುಪಿ, ಫೆ.10: ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು ಫೆಬ್ರವರಿ 11 ಹಾಗೂ 12 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಫೆ.11 ರಂದು ಸಂಜೆ ಕಾರ್ಕಳಕ್ಕೆ ಆಗಮಿಸಿ, ವಾಸ್ತವ್ಯ ಮಾಡಲಿದ್ದಾರೆ. ಫೆ. 12 ರಂದು ಬೆಳಗ್ಗೆ 8 ಗಂಟೆಗೆ ಹೆಬ್ರಿ ಬೈಪಾಸ್ ಬಳಿ ಹೆಬ್ರಿ ಪೊಲೀಸ್ ಠಾಣೆಯ ನೂತನ ಕಟ್ಟಡದ ಗುದ್ದಲಿಪೂಜೆ ನೆರವೇರಿಸಲಿರುವರು, 9 ಕ್ಕೆ ಹೆಬ್ರಿ ತಾಲೂಕು ಕಚೇರಿಯಲ್ಲಿ ಕಡತ ವಿಲೇವಾರಿ ಸಪ್ತಾಹಕ್ಕೆ ಚಾಲನೆ, 10.30 ಕ್ಕೆ ಕಾರ್ಕಳ ತಾಲೂಕು ಕಚೇರಿಯಲ್ಲಿ ಕಡತ ವಿಲೇವಾರಿ ಸಪ್ತಾಹಕ್ಕೆ ಚಾಲನೆ ನೀಡಿ, ನಂತರ ಮಂಗಳೂರಿಗೆ ತೆರಳಲಿರುವರು.