ಕುಂದಾಪುರ: ವಕ್ವಾಡಿ ಪ್ರವೀಣಕುಮಾರ್ ಶೆಟ್ಟಿ ಅವರಿಗೆ ಹುಟ್ಟೂರು ಸನ್ಮಾನ ಅಭಿನಂದನಾ ಸಮಾರಂಭವು ಫೆ.27 ರವಿವಾರ ಬೆಳಗ್ಗೆ 9ರಿಂದ ರಾತ್ರಿ 10.30ರ ವರೆಗೆ ವಕ್ವಾಡಿ ಮುಖ್ಯರಸ್ತೆ ಫಾರ್ಚೂನ್ ವಿಲೇಜ್ ಹೋಟೆಲ್ ಹತ್ತಿರ ನಡೆಯಲಿದೆ.
ಫೆ.27 ಸಂಜೆ 5 ಗಂಟೆಗೆ ಸಮಾರಂಭದ ಆಶೀರ್ವಚನವನ್ನು ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಸುಬ್ರಹ್ಮಣ್ಯ ಮಠಾಧೀಶರು ಮಾಡಲಿರುವರು.
ಅಧ್ಯಕ್ಷತೆಯನ್ನು ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರು ಸನ್ಮಾನ ಸಮಿತಿಯ ಅಧ್ಯಕ್ಷರಾದ ಬಸ್ರೂರು ಅಪ್ಪಣ್ಣ ಹೆಗಡೆಯವರು ವಹಿಸಲಿರುವರು.
ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನೀಲ್ ಕುಮಾರ್ ಇವರಿಂದ ಪ್ರಸಾದ್ ನೇತ್ರಾಲಯಕ್ಕೆ ಆಂಬುಲೆನ್ಸ್ ಹಸ್ತಾಂತರಿಸಲಾಗುವುದು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ ಅವರಿಂದ ಆರ್ಥಿಕ ಅಶಕ್ತರಿಗೆ ಧನಸಹಾಯ ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಇವರಿಂದ ಬಹುಮಾನ ವಿತರಣೆ ಹಾಗೂ ಮಂಗಳೂರು ಶ್ರೀರಾಮಕೃಷ್ಣ ಡಿಗ್ರಿ ಕಾಲೇಜ್ ನ ಪ್ರಾಂಶುಪಾಲರಾದ ಪ್ರೊಫೆಸರ್ ಎಂ. ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣ ಮಾಡಲಿರುವರು.ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ, ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಯುಟಿ ಖಾದರ್ ಉಡುಪಿ ಶಾಸಕ ರಘುಪತಿ ಭಟ್ ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ, ಮಂಗಳೂರು ಉತ್ತರ ಶಾಸಕರಾದ ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸಭಾಪತಿಗಳು ಕೆ.ಪ್ರತಾಪ್ ಚಂದ್ರ ಶೆಟ್ಟಿ, ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್, ಮೂಡಬಿದ್ರೆ ಆಳ್ವಾಸ್ ಪ್ರತಿಷ್ಠಾನ ಡಾ. ಎನ್ ಮೋಹನ್ ಅಲ್ವ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ, ರೆಡಿಷನ್ ಬ್ಲೂ ಹೋಟೆಲ್ ಬೆಂಗಳೂರು ಎಂಡಿ ಕೆ.ನಾಗರಾಜ, ಯುಎಇ ಕನ್ನಡಿಗಾಸ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಬೆಂಗಳೂರು ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ. ಶ್ರೀನಿವಾಸ್, ವಿಶ್ವ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಬೆಂಗಳೂರು ಎಂ.ಆರ್.ಜಿ. ಗ್ರೂಪ್ ಚೇರ್ಮೆನ್ ಕೆ. ಪ್ರಕಾಶ್ ಶೆಟ್ಟಿ ಹಾಗೂ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಫೆ.27 ಬೆಳಗ್ಗೆ 9 ಗಂಟೆಗೆ ಉಡುಪಿ ಪ್ರಸಾದ್ ನೇತ್ರಾಲಯ ಅವರಿಂದ ಉಚಿತ ಕಣ್ಣಿನ ತಪಾಸಣೆ ( ಅಗತ್ಯವಿರುವವರಿಗೆ ಉಚಿತ ಕನ್ನಡಕ ವಿತರಣೆ ಮತ್ತು ಉಚಿತ ಶಸ್ತ್ರಚಿಕಿತ್ಸೆ) ನಡೆಯಲಿದೆ.
ಮಧ್ಯಾಹ್ನ ಗಂಟೆ 1-00 ರಿಂದ 2-00 ತನಕ ಸಹಭೋಜನ ಅಪರಾಹ್ನ 2-00 ರಿಂದ ಆಹ್ವಾನಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಸ್ಪರ್ಧೆ ವಿಜೇತ ತಂಡಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಪಾರಿತೋಷಕ ಹಾಗೂ ನಗದು ಬಹುಮಾನ ನೀಡಲಾಗುವುದು.
ರಾತ್ರಿ ಗಂಟೆ 8-30 ರಿಂದ ಆಳ್ವಾಸ್ ಪ್ರತಿಷ್ಠಾನ ಮೂಡುಬಿದಿರೆ ಇಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ವೈಭವ ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಕನ್ನಡದ ಖ್ಯಾತ ಚಲನಚಿತ್ರ ನಟರು ಭಾಗವಹಿಸಲಿದ್ದಾರೆ ಹಾಗೂ ರಾತ್ರಿ ಸಾಮೂಹಿಕ ಭೋಜನ ನಡೆಯಲಿದೆ.