ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೂ ನಕಲಿ ಸಿಡಿಯ ಭಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅವರು, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ವಿರುದ್ಧ ಮಾನಹಾನಿಕರ ನಕಲಿ ವಿಡಿಯೋ ತಯಾರಿಸಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಇದರಿಂದ ತಮ್ಮ ಚಾರಿತ್ರ್ಯವಧೆಯಾಗಲಿದೆ ಎಂದು ಮುಂಜಾಗೃತವಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ನನ್ನ ವಿರುದ್ಧ ನಕಲಿ ಸಿಡಿ ಸೃಷ್ಟಿಸಿ ಮೀಡಿಯಾದಲ್ಲಿ ಹರಿಬಿಡುವ ಸಾಧ್ಯತೆ ಇದೆ. ಹೀಗಾಗಿ ಅಂತಹ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳು ಹಾಗೂ ಪತ್ರಿಕೆಯ ವಿರುದ್ಧ ಕೋರ್ಟ್ ನಿಂದ ನಿರ್ಬಂಧಕಾಜ್ಞೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಅಮೇರಿಕಾದ ಮಾಜಿ ಅಧ್ಯಕ್ಷ ಒಬಾಮಾ, ಕ್ವೀನ್ ಎಲಿಜಬೆತ್ ನಕಲಿ ವಿಡಿಯೋ ಮಾಡಲಾಗಿತ್ತು. ಅಂತಹದ್ದೇ ವಿಡಿಯೋ ಪ್ರಸಾರ ಮಾಡಿದರೆ ತಮ್ಮ ಘನತೆಗೆ ಧಕ್ಕೆ ಆಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.