ಪಹಲ್ಗಾಮ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಇಡೀ ಭಾರತವೇ ದುಃಖ ಪಡುತ್ತಿದೆ. ಹೀಗಿರುವಾಗ ಪಾಕಿಸ್ತಾನಿ ನಟನ ಚಿತ್ರವೊಂದು ಭಾರತದಲ್ಲಿ ಬಿಡುಗಡೆಗೊಳ್ಳಲು ತುದಿಗಾಲಲ್ಲಿ ನಿಂತಿತ್ತು. ಇದೀಗ ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ‘ಅಬೀರ್ ಗುಲಾಲ್’ ಚಿತ್ರವನ್ನು ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಡಗಡೆ ಮಾಡಲಾಗುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಚಿತ್ರ ಇದೇ ಮೇ. 8 ರಂದು ಬಿಡುಗಡೆಯಾಗಲಿತ್ತು. ಈ ಚಿತ್ರ ಅವರ ಕಾರಿಯರ್ ಗೆ ಮಹತ್ವದ್ದಾಗಿತ್ತು. ಇದೀಗ ಪಾಕಿಸ್ತಾನಕ್ಕೆ ಭಾರತದಲ್ಲಿ ಎಲ್ಲಾ ರೀತಿಯ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ನಟನ ಸಿನಿಮಾ ಕೂಡ ಬಿಡುಗಡೆಯಾಗಬಾರದು ಎನ್ನುವ ಮಾತುಗಳು ಜೋರಾಗಿದೆ. ಹಾಗಾಗಿ ಯಾವುದೇ ಪಾಕಿಸ್ತಾನ ನಟ ನಟಿಯವರ ಚಿತ್ರಗಳು ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ.
ಇವತ್ತು ಮುಂಜಾನೆ, ನಟ ಫವಾದ್ ಖಾನ್ ಕಾಶ್ಮೀರದ ಘೋರ ದಾಳಿಯ” ಸುದ್ದಿ ಕೇಳಿ ” ದುಃಖಿತನಾಗಿದ್ದೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು, ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿ ಕೂಡ ಹಾಕಿದ್ದರು. ಸಂತಾಪ ವ್ಯಕ್ತಪಡಿಸಿದ್ದರು. ಈ ಬಳಿಕ ಯಾವುದೇ ಕಾರಣಕ್ಕೂ ಪಾಕಿಸ್ತಾನದ ನಟರ ಚಿತ್ರಗಳು ಭಾರತದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












