ನಿಟ್ಟೆ: ಕಾರ್ಕಳ ಪಡುಬಿದ್ರೆ ಮುಖ್ಯರಸ್ತೆಯ ಹಾಲೆಕಟ್ಟೆ ಕಲ್ಯಾದ ಸುರಕ್ಷ ಸಂಕೀರ್ಣದಲ್ಲಿ ನಿಟ್ಟೆ ರೈತ ಉತ್ಪಾದಕ ಸಂಸ್ಥೆಯ ವ್ಯಾಪಾರ ಮಳಿಗೆಯು ಜೂ.17 ರಂದು ಆರಂಭವಾಯಿತು.
ನಿಟ್ಟೆ ಆಸುಪಾಸಿನ ಎಲ್ಲಾ ರೈತರ ಸಮೂಹ ಇದಾಗಿದ್ದು, ಕೃಷಿಗೆ ಬೇಕಾದ ಎಲ್ಲಾ ಸಾಮಾಗ್ರಿಗಳು ಹಾಗೂ ಸೇವಾ ಸೌಲಭ್ಯಗಳು ಇಲ್ಲಿ ಲಭ್ಯವಿರುತ್ತದೆ.
ಕಾರ್ಯಕ್ರಮದಲ್ಲಿ ನಿಟ್ಟೆ ರೈತ ಉತ್ಪಾದಕ ಸಂಸ್ಥೆಯ ಚೇರ್ ಮ್ಯಾನ್ ಅಶೋಕ್ ಅಡ್ಯಂತಾಯ, ನಿಟ್ಟೆ ಸಂಸ್ಥೆಯ ಅಟಲ್ ಇಂಕ್ಯೂಬೇಶನ್ ಸೆಂಟರ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎ.ಪಿ. ಆಚಾರ್ಯ, ಇಂಕ್ಯೂಬೇಶನ್ ಮ್ಯಾನೇಜರ್ ಪುನೀತ್ ರೈ, ನಿಟ್ಟೆ ರೈತ ಉತ್ಪಾದಕ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಜಯ್ ಶೆಟ್ಟಿ, ಸಂಸ್ಥೆಯ ನಿರ್ದೇಶಕರಾದ ಯೋಗೀಶ್ ಹೆಗ್ಡೆ, ಶಂಕರ್ ಕುಂದರ್, ವಿಕೆ ಭಟ್, ಗಜಾನನ ಶೆಟ್ಟಿ, ಸುರೇಶ್ ಮೂಲ್ಯ, ಹಾಗೂ ಎಐಸಿ ನಿಟ್ಟೆಯ ಪ್ರವೀಣ್ ಜಾಧವ್, ದೀಕ್ಷಾ ರೈ, ದೀಕ್ಷಾ ಶೆಟ್ಟಿ, ಅಶೋಕ್ ಸಾಲಿಯಾನ್ ಉಪಸ್ಥಿತರಿದ್ದರು.