ಭಾರತ-ಐರ್ಲೆಂಡ್‌ ಮೊದಲ ಟಿ-20ಗೆ ಪ್ರಸಿದ್ಧ ಕೃಷ್ಣ, ರಿಂಕು ಪಾದಾರ್ಪಣೆ

ಡಬ್ಲಿನ್​ (ಐರ್ಲೆಂಡ್​): ಇಲ್ಲಿನ ದಿ ವಿಲೇಜ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐರ್ಲೆಂಡ್​ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.ಈ ಸರಣಿಯ ಮೂಲಕ ಪ್ರಸಿದ್ಧ ಕೃಷ್ಣ ಮತ್ತು ರಿಂಕು ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇಬ್ಬರು ಆಟಗಾರರಿಗೆ ಜಸ್ಪ್ರೀತ್​ ಬುಮ್ರಾ ಕ್ಯಾಪ್​ ಕೊಟ್ಟು ಸ್ವಾಗತಿಸಿದರು. ಐರ್ಲೆಂಡ್​-ಭಾರತ ನಡುವಿನ ಮೂರು ಟಿ20 ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು, ಟಾಸ್​ ಗೆದ್ದ ಭಾರತ ಫೀಲ್ಡಿಂಗ್​ ಆಯ್ದುಕೊಂಡಿದೆ.

ಐರ್ಲೆಂಡ್​​: ಪಾಲ್ ಸ್ಟಿರ್ಲಿಂಗ್(ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್( ವಿಕೆಟ್​ ಕೀಪರ್​), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್

ಭಾರತ: ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​​), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ (ನಾಯಕ), ರವಿ ಬಿಷ್ಣೋಯ್

ಜೈಸ್ವಾಲ್​, ಗಾಯಕ್ವಾಡ್​ ಮೇಲೆ ಭರವಸೆ: ವೆಸ್ಟ್​ ಇಂಡೀಸ್​ನಲ್ಲಿ ಪಾದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್​ ಒಂದು ಅರ್ಧಶತಕದ ಮೂಲಕ ಗಮನಾರ್ಹ ಬ್ಯಾಟಿಂಗ್​ ಪ್ರದರ್ಶನ ಮಾಡಿದ್ದಾರೆ. ಇವರು ಐರ್ಲೆಂಡ್​ನಲ್ಲಿ ಮೂರು ಪಂದ್ಯಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಮುಂದಿನ ವರ್ಷದ ವಿಶ್ವಕಪ್​ ತಂಡದ ಕದ ತಟ್ಟುವ ಅವಕಾಶವಿದೆ.ಸಂಜು ಸ್ಯಾಮ್ಸನ್​ಗೆ ಮತ್ತೊಂದು ಅವಕಾಶ: ವೆಸ್ಟ್​ ಇಂಡೀಸ್​ ಸರಣಿಯಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್​ಗೆ ಕೀಪಿಂಗ್​ ಮತ್ತು ಮಧ್ಯಮ ಕ್ರಮಾಂಕದ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.