ನವದೆಹಲಿ: ಕುಟುಂಬ ನಡೆಸುವ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಹಾರ ಚುನಾವಣೆ ಮತ್ತು ವಿವಿಧ ಉಪಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶಾದ್ಯಂತ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಬಿಜೆಪಿಯ ಯಶಸ್ಸನ್ನು ಉಲ್ಲೇಖಿಸಿ, ಈ ಫಲಿತಾಂಶಗಳು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ವಿಸ್ತರಿಸಿದೆ ಎಂದರು.
ಬಡವರು, ದಲಿತರು, ವಂಚಿತರು ತಮ್ಮ ಪ್ರಾತಿನಿಧ್ಯವನ್ನು ನೋಡುವ ಏಕೈಕ ರಾಷ್ಟ್ರೀಯ ಪಕ್ಷ ಬಿಜೆಪಿ. ಪ್ರತಿ ವಿಭಾಗ, ಪ್ರದೇಶದ ಅಗತ್ಯವನ್ನು ಬಿಜೆಪಿ ಮಾತ್ರ ಅರ್ಥಮಾಡಿಕೊಳ್ಳುತ್ತದೆ. ಮತದಾನದ ಫಲಿತಾಂಶಗಳು ನಾವು ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ರೀತಿಯನ್ನು ಅನುಮೋದಿಸಿವೆ ಎಂದು ಅವರು ಹೇಳಿದರು.
ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವ ‘ಸೈಲೆಂಟ್ ಮತದಾರರು’ ದೇಶಾದ್ಯಂತ ಮಹಿಳೆಯರು ಎಂದು ಮೋದಿ ಹೇಳಿದರು.

















