ನವದೆಹಲಿ: 62 ಮಂದಿ ಪ್ರಯಾಣಿಸುತ್ತಿದ್ದ ಇಂಡೋನೇಷ್ಯಾದ ಶ್ರೀವಿಜಯ ಏರ್ ಎಸ್ ಜಿ 182 ಎಂಬ ಡೊಮೆಸ್ಟಿಕ್ ವಿಮಾನವು ಪತನಗೊಂಡಿದೆ.
ಶನಿವಾರ ಸೂಕರ್ನೊ-ಹಟ್ಟಾ ವಿಮಾನ ನಿಲ್ದಾಣದಿಂದ ಟೇಕ್ಆಫ್ ಆದ ಕೆಲ ಹೊತ್ತಿನಲ್ಲೇ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಇದೀಗ ಆ ವಿಮಾನ ಸಮುದ್ರದಲ್ಲಿ ಪತನಗೊಂಡಿದೆ ಎಂದು ತಿಳಿದುಬಂದಿದೆ. ಆರು ಮಕ್ಕಳು ಸಹಿತ 62 ಮಂದಿ ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಹಂತದ ಮಾಹಿತಿ ಲಭಿಸಿದೆ.
ವಿಮಾನವು ಸ್ಫೋಟಗೊಂಡಿದ್ದು, ಅದರ ಭಾಗಗಳು ಛಿದ್ರಗೊಂಡಿದೆ. ರಕ್ಷಣಾ ಪಡೆಯ ಸಿಬ್ಬಂದಿಗೆ ಅದರ ಅವಷೇಶಗಳು ಲಭಿಸಿವೆ.
ಜಕಾರ್ತದಿಂದ ಹೊರಟ ವಿಮಾನ ನಾಲ್ಕು ನಿಮಿಷಗಳಲ್ಲೇ ಸಂಪರ್ಕ ಕಳೆದುಕೊಂಡಿದೆ. ಕೇವಲ ಒಂದೇ ನಿಮಿಷದಲ್ಲಿ 10 ಸಾವಿರ ಅಡಿ ವಿಮಾನ ಕುಸಿತ ಕಂಡಿತ್ತು.