ಉಡುಪಿ,ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಕೋರೆಲ್ ಟೆಕ್ನಾಲಜೀಸ್, ಬೆಂಗಳೂರು, ಕಾಲೇಜಿನ ಐಎಸ್‌ಟಿಇ ಘಟಕ ಮತ್ತು ಐಇಇಇ ಘಟಕ ಇದರ ಸಹಯೋಗದೊಂದಿಗೆ “ಎಐ ಮ್ಯಾಟ್‌ಲ್ಯಾಬ್ ಆಧಾರಿತ ಹಾರ್ಡ್ವೇರ್
ಇಂಟಿಗ್ರೇಷನ್‌ನೊಂದಿಗೆ ಆಳವಾದ ಕಲಿಕೆ” ಎಂಬ ವಿಷಯದ ಕುರಿತು ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರವನ್ನು 14 ರಿಂದ 18 ಜುಲೈವರೆಗೆ ಆಯೋಜಿಸಲಾಗಿದೆ.
ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು 14 ಜುಲೈ 2025 ರಂದು ನಡೆಯಿತು. ಕೋರೆಲ್ ಟೆಕ್ನಾಲಜೀಸ್ ಇದರ ಮ್ಯಾಥ್ಸ್ವರ್ಕ್ನ ಹಿರಿಯ ಇಂಜಿನಿಯರ್ ಶ್ರೀ ರಕ್ಷಿತ್ ಬಿ ಎಸ್ ಇವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇವರು ಸುಧಾರಿತ ಮ್ಯಾಟ್‌ಲ್ಯಾಬ್ ತಂತ್ರಗಳ ಬಗ್ಗೆ ಮಾತನಾಡಿ ಮುಂದಿನ ಅಧಿವೇಶನಕ್ಕೆ ಬಲವಾದ ಅಡಿಪಾಯವನ್ನು ಹಾಕಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಾಗಾರದಲ್ಲಿ ಭಾಗವಹಿಸುವ ಎಲ್ಲರೂ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಇಂತಹ ಕಾರ್ಯಗಾರಗಳು ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ಸಾಮರ್ಥ್ಯ ಹೆಚ್ಚಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ ಎಂದರು.
ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ.ಸೌಮ್ಯ ಜೆ ಅತಿಥಿಗಳನ್ನು ಸ್ವಾಗತಿಸಿದರು, ಕಾರ್ಯಕ್ರಮದ ಸಂಯೋಜಕರಾದ ಡಾ. ಸದಾನಂದ ಎಲ್ ವಂದಿಸಿದರು.












