ಉಡುಪಿ: ರೈತರ ಮಕ್ಕಳಿಗಾಗಿ ಮೀಸಲಿರುವ ಕೃಷಿ ವಿಜ್ಞಾನ ಹಾಗೂ ಪಶು ವೈದ್ಯಕೀಯ ವಿಜ್ಞಾನ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಗಾಗಿ ಪ್ರಾಯೋಗಿಕ ಪರೀಕ್ಷೆಯು ಮೇ 10 ರಂದು ಬೆಳಿಗ್ಗೆ 9.00 ಗಂಟೆಗೆ ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ಮತ್ತು ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು ಅರ್ಹ ಅಭ್ಯರ್ಥಿಗಳು ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಲ್ ಟಿಕೆಟ್ ಪಡೆದು ಪರೀಕ್ಷೆಗೆ ಹಾಜರಾಗಬಹುದು.
ಕೃಷಿಕರ ಕೋಟಾದಲ್ಲಿ ಈಗಾಗಲೇ ಸಿ.ಇ.ಟಿ ಅರ್ಜಿ ಸಲ್ಲಿಸಿ, ಅನರ್ಹರಾಗಿರುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಲು ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕೊನೆಯ ದಿನಾಂಕವನ್ನು ಮೇ 04 ರವರೆಗೆ ವಿಸ್ತರಿಸಲಾಗಿದೆ.
ಪ್ರಾಯೋಗಿಕ ಪರೀಕ್ಷಾ ಫಲಿತಾಂಶವನ್ನು ಮೇ 14 ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ www.uasbangalore.edu.in , www.uasd.edu.in/www.uasd.edu, www.uhsbagalkot.edu.in/uhsbagalkot.karnataka.gov.in, www.uahs.edu.in, www.uasraichur.edu.in/raichur.karnataka.gov.in, www.kvafsu.edu.inಗೆ ಭೇಟಿ ನೀಡಬಹುದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

















