ಬೆಂಗಳೂರು: ಡ್ರಗ್ಸ್ ದಂಧೆಯ ನಂಟಿನ ಆರೋಪದಡಿ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ, ಬಹುಭಾಷಾ ನಟನೊಂದಿಗೆ ನಂಟು ಇತ್ತು ಎಂಬ ವಿಚಾರ ಈಗ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ.
ಪೊಲೀಸರು ಸಿದ್ಧಪಡಿಸಿರುವ ಬಂಧಿತ ನಟಿಯರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಲಿಸ್ಟ್ ನಲ್ಲಿ ಈ ಸ್ಟಾರ್ ನಿರ್ದೇಶಕನ ಹೆಸರಿದೆ.
ಈ ಸ್ಟಾರ್ ನಿರ್ದೇಶಕ ಸಂಜನಾಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕೆಗೆ ಹೆಚ್ಚು ಆಪ್ತನಾಗಿದ್ದ. ಅಲ್ಲದೆ, ಆಕೆಗೆ ಸ್ಯಾಂಡಲ್ ವುಡ್ ನಲ್ಲಿ ಗಾಢ್ ಫಾದರ್ ನಂತಿದ್ದ. ಸಂಜನಾಗೆ ಬೇಕಾದಗಳೆಲ್ಲ ಈ ನಿರ್ದೇಶಕ ಸಹಾಯ ಮಾಡುತ್ತಿದ್ದ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಕನ್ನಡದ ಹಲವು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ನಟ ಈತ. ಆದರೆ ಈತ ನಿರ್ದೇಶನದಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾನೆ. ವೃತ್ತಿ ಜೀವನದಲ್ಲಿ ಸಂಜನಾಳಿಗೆ ಬೆನ್ನೆಲುಬಾಗಿ ನಿಂತಿದ್ದ ಎಂದು ತಿಳಿದುಬಂದಿದೆ. ನಟಿಯ ಆಪ್ತರ ಪಟ್ಟಿಯಲ್ಲಿ ಈತನ ಹೆಸರು ಉಲ್ಲೇಖವಾಗಿದೆ.