ಪ್ರತಿಷ್ಠಿತ ಐಐಟಿಗಳಿಗೆ ಪ್ರವೇಶ ಪಡೆದ ಎಕ್ಸ್ ಪರ್ಟ್ ಕಾಲೇಜು ವಿದ್ಯಾರ್ಥಿಗಳು

ಮಂಗಳೂರು: ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಚಿಂತ್ಯಾ ಅರವಿಂದ್ ರೈ ಐಐಟಿ ಮುಂಬಯಿ ಹಾಗೂ ಮಧುಪ್ರಿಯಾ ಕೆ.ಎಂ. ಐಐಟಿ ರೂರ್ಕಿಯಲ್ಲಿ ಜನರಲ್ ಮೆರಿಟ್‍ನಲ್ಲಿ ಸೀಟು ಪಡೆದುಕೊಂಡಿದ್ದಾರೆ.

ಎಂಜಿನಿಯರಿಂಗ್ ಕಾಲೇಜಿನ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪರೀಕ್ಷೆಯ ಫಿಸಿಕ್ಸ್ ನಲ್ಲಿ ಅಚಿಂತ್ಯ ಅರವಿಂದ್ ರೈ 100 ಪರ್ಸೆಂಟೈಲ್ ಪಡೆದು, ಒಟ್ಟು 99.8709961 ಪರ್ಸೆಂಟೈಲ್ ಹಾಗೂ ಜೆಇಇ ಎಡ್ವಾನ್ಸ್ ಪರೀಕ್ಷೆಯಲ್ಲಿ ಜನರಲ್ ಮೆರಿಟ್‍ನಲ್ಲಿ 1883ನೇ ಶ್ರೇಣಿ ಪಡೆದಿದ್ದರು. ಮಧುಪ್ರಿಯಾ ಕೆ. 99.7100308 ಪರ್ಸೆಂಟೈಲ್ ಪಡೆದು, ಎಡ್ವಾನ್ಸ್ ಪರೀಕ್ಷೆಯಲ್ಲಿ ಜನರಲ್ ಮೆರಿಟ್‍ನಲ್ಲಿ 2922ನೇ ಶ್ರೇಣಿ ಪಡೆದಿದ್ದರು.

ಏಕ್ತಾ ಕೆ. ಶೇಟ್ ತಿರುವನಂತಪುರಂನ ಐಐಎಸ್‍ಇಆರ್ ಸಂಸ್ಥೆಗೆ ಹಾಗೂ ಮೇಧಾ ವಿಶಾಖಪಟ್ಟಣಂನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಆ್ಯಂಡ್ ಎನರ್ಜಿಗೆ ಪ್ರವೇಶ ಪಡೆದಿದ್ದಾರೆ.