♦♦ಶರಧಿ ಶೆಟ್ಟಿ
ಅಯ್ಯೋ ದೇವ್ರೆ ಬೇಕಿತ್ತಾ ನಂಗೆ ಇದೆಲ್ಲಾ? ಅಂತ ಪರಿಸ್ಥಿತಿ, ಮನಸ್ಥಿತಿ ಕೆಟ್ಟಾಗ ಎಲ್ಲರೂ ತಮ್ಮಲ್ಲೇ ಅಂದುಕೂಂಡು ನೊಂದುಕೊಳ್ಳುವುದು ಸಹಜ..”ಶರಧಿ ಏಳು, ಓದು, ನೆನಪಿರಲಿ ಎಸ್ ಎಸ್.ಎಲ್. ಸಿ. ನೀನೀಗ” ಅಂತ ಪಕ್ಕದ ಮನೆಯ ರಾಜಿ ಆಂಟಿ ಕೂಡ ಹೇಳಲು ಶುರು ಮಾಡಿದ್ರೆ ಹೇಗ್ ಇರಬಹುದು ನನ್ನ ಪರಿಸ್ಥಿತಿ? ಆವಾಗ್ಲೇ ಧೃಢ ನಿಧಾ೯ರ ಮಾಡಿದೆ, ಹಾಸ್ಟೆಲ್ ಸೇರಬೇಕೆಂದು, ಈ ಮನೆಯವರ ರಗಳೆಯೇ ಬೇಡ ಅಂತ, ಎಂದೂ ಪುಸ್ತಕ ಮುಟ್ಟದ ನಾನು, ಅದ್ಭುತ ಎನ್ನುವ೦ತೆ ಓದಿ ಅಂಕ ಪಡೆದು ಹೇಗೋ ಹಾಸ್ಟೆಲ್ ಸೇರಿಕೊಂಡದ್ದಾಯಿತು.
ಅಬ್ಬಾ ಹಾಸ್ಟೆಲ್ ಸೇರಿ ಸದ್ಯ ಬದುಕಿಕೊಂಡೆ ಅಂತ ಅಂದುಕೊಂಡ ನಂಗೆ ಆ ಮೇಲೆ ಕಾಲಿಗೆ ಮೆತ್ತಿಕೊಂಡ ಕೊಳೆ ತೊಳೆದು, ಕೆಸರು ಹೊಂಡಕ್ಕೆ ಬಿದ್ದೆನೆಂದು ಅರಿವಾಗತೊಡಗಿತು.
ಜೀವನದಲ್ಲಿ ಅಲ್ಲಿ ಯಾವತ್ತೂ ನನ್ನ ಪುಟ್ಟ ಕರ್ಚೀಪನ್ನೇ ಒಗೆಯದಿರದ ನಂಗೆ ಈ ಹಾಸ್ಟೆಲ್ ಸೇರಿದ್ದೇ ಎಲ್ಲಾ ಬಟ್ಟೆ ನಾನೇ ಒಗೆಯಬೇಕಿತ್ತು. ಬೆಳಗಾದರೆ ಮನೆ ತಿಂಡಿಗೆ ಮೂಗು ಮುರಿತಿದ್ದ ನನಗೆ ಹಾಸ್ಟೆಲ್ ನಲ್ಲಿ ಏನು ಮಾಡಿದರೂ ತಿನ್ನಲೇಬೇಕಿತ್ತು. ದಿನ ಅಲ್ಲಿ ಇಲ್ಲಿ ಅಡ್ಡಾಡಿ ಬೆಳೆದ ನನಗೆ ಹಾಸ್ಟೆಲ್ ನಿಂದ ಹೊರಗೆ ಬರಲು ತಿಂಗಳ ಕೊನೆಯ ದಿನ ಕಾಯಬೇಕಿತ್ತು. ಕಾದಂಬರಿ ಪ್ರಿಯೆಯಾಗಿದ್ದ ನನಗೆ ಪಾಠ ಪುಸ್ತಕದ ಪರಿಚಯ ಆಯಿತು.
ಸಿನಿಮಾನೇ ಪ್ರಪಂಚ ಎನ್ನುತ್ತಿದ್ದವಳಿಗೆ ಜೀವನದ ಅವಶ್ಯಕತೆಯನ್ನು ಹಾಸ್ಟೆಲ್ ತಿಳಿಸಿತು. ಮನಸ್ಸಾದಾಗ ಏಳುತ್ತಿದ್ದ ಹಾಸ್ಟೆಲ್ ನಲ್ಲಿ ನಾನು ಬೇಗ ಏಳಲೇಬೇಕಿತ್ತು. ಎರಡು ಜನರೊಂದಿಗೆ ಹೊಂದಿಕೊಂಡು ಹೋಗಲು ಹಾಸ್ಟೆಲ್ ಕಲಿಸಿತು. ಮನೆಯ ಅವಶ್ಯಕತೆಯನ್ನೂ ತಿಳಿಸಿದ್ದು ಈ ಹಾಸ್ಟೆಲ್ ಅನ್ನೋ ಪ್ರಪಂಚವೇ.ಹಂಗೋ ಹಿಂಗೋ ಜೀವನ ಹೋಗುತ್ತೆ ಅಂತಿದ್ದ ನನಗೆ ಜೀವನದ ಅವಶ್ಯಕತೆಯನ್ನು ಸಾರಿ ಹೇಳಿತು.
ಸ್ನೇಹಿತರೆ ನ ಹೇಳೊದಿಷ್ಟೆ, ಜೀವನದ ಪಯಣದಲ್ಲಿ ಸಿಗೋ ಪ್ರತಿಯೊಂದು ಕಷ್ಟದಲ್ಲೂ ನಾವು ಹೊಸದೊಂದು ಪಾಠವನ್ನು ಕಲಿಯಬಹುದು.ದರೆ ಪಾಠದಿಂದ ಸ್ಫರ್ತಿ ಪಡೆದು ಬದುಕು ಕಟ್ಟಿಕೊಳ್ಳಬೇಕು.ನಿಮಗೂ ಇಂಹ ಪಾಠಗಳು ಸಿಗಲಿ ಎನ್ನುವುದು ನನ್ನ ಹಾರೈಕೆ