ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿಗೆ ಶೇ. 100 ಫಲಿತಾಂಶ: ಶೇ.99.86 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ಮಂಗಳೂರು: ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ವಳಚ್ಚಿಲ್ ಹಾಗೂ ಕೊಡಿಯಾಲ್‍ಬೈಲ್‍ನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 100 ಫಲಿತಾಂಶದ ಸಾಧನೆ ಮಾಡಿದೆ.

ಒಟ್ಟು ಪರೀಕ್ಷೆ ಬರೆದ 1439 ವಿದ್ಯಾರ್ಥಿಗಳಲ್ಲಿ 1437 ವಿದ್ಯಾರ್ಥಿಗಳು ಅಂದರೆ ಶೇ.99.86ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಪದವಿ ಪೂರ್ವ ಶಿಕ್ಷಣದಲ್ಲಿ ಅಭೂತ ಪೂರ್ವ ಸಾಧನೆಯನ್ನು ಮಾಡಿದ್ದಾರೆ.

ಶೇ. 95ಕ್ಕಿಂತ ಅಧಿಕ ಅಂಕವನ್ನು 168 ವಿದ್ಯಾರ್ಥಿಗಳು ಪಡೆದಿದ್ದು, ಶೇ.90ಕ್ಕಿಂತ ಅಧಿಕ ಅಂಕವನ್ನು 713 ವಿದ್ಯಾರ್ಥಿಗಳು, ಶೇ.85ಕ್ಕಿಂತ ಅಧಿಕ ಅಂಕವನ್ನು 1067 ವಿದ್ಯಾರ್ಥಿಗಳು ಪಡೆದಿದ್ದಾರೆ.

ವಿಭಾ ಕಾರ್ನಾಡ್, ಪ್ರತಿಕ್ಷಾ ನರಸಿಂಹ ನಾಯಕ್, ಅಶ್ವಿನಿ ಪ್ರಭು ಜಿ., ಶ್ರೇಯಾ ಎಸ್. ಹಾಗೂ ಸುಧೀಕ್ಷಾ ಸದಾನಂದ ಕುಮಾರ್ ಅವರು 600ರಲ್ಲಿ 587 ಅಂಕ ಪಡೆದು ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಇದರಲ್ಲಿ ಅಶ್ವಿನಿ ಪ್ರಭು ಜಿ. ಹಾಗೂ ವಿಭಾ ಕಾರ್ನಾಡ್ ಅವರು ನಾಲ್ಕು ಮತ್ತು ಪ್ರತಿಕ್ಷಾ ನರಸಿಂಹ ನಾಯಕ್, ಶ್ರೇಯಾ ಎಸ್, ಸುಧೀಕ್ಷಾ ಸದಾನಂದ ಕುಮಾರ್ ಅವರು ಮೂರು ವಿಷಯಗಳಲ್ಲಿ ಶೇ. 100 ಅಂಕ ಪಡೆದಿದ್ದಾರೆ. ಇದಲ್ಲದೆ ಖುಷಿ ಗಡಿಗೇಪ್ಪ ಚಿತ್ತರಗಿ ನಾಲ್ಕು ವಿಷಯಗಳಲ್ಲಿ ಶೇ.100 ಅಂಕ ಪಡೆದಿದ್ದಾರೆ.

3 ವಿದ್ಯಾರ್ಥಿಗಳು ನಾಲ್ಕು ವಿಷಯಗಳಲ್ಲಿ, 23 ವಿದ್ಯಾರ್ಥಿಗಳು 3 ವಿಷಯಗಳಲ್ಲಿ, 79 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ಇನ್ನು ಫಿಸಿಕ್ಸ್‍ನಲ್ಲಿ 79 ವಿದ್ಯಾರ್ಥಿಗಳು, ಕೆಮೆಸ್ಟ್ರಿಯಲ್ಲಿ 21, ಬಯೋಲಾಜಿಯಲ್ಲಿ 32, ಮ್ಯಾಥಮೆಟಿಕ್ಸ್‍ನಲ್ಲಿ 236, ಸ್ಟಾಟಿಸ್ಟಿಕ್ಸ್‍ನಲ್ಲಿ 16, ಕಂಪ್ಯೂಟರ್ ಸೈನ್ಸ್‍ನಲ್ಲಿ 7, ಇಲೆಕ್ಟ್ರಾನಿಕ್ಸ್‍ನಲ್ಲಿ 6, ಸಂಸ್ಕøತದಲ್ಲಿ 37, ಕನ್ನಡದಲ್ಲಿ 3 ಮತ್ತು ಹಿಂದಿನಲ್ಲಿ 1 ವಿದ್ಯಾರ್ಥಿ ನೂರಕ್ಕೆ ನೂರು ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.

ವಿವೇಕ್ ಕೆ.ಎಸ್. (586), ಶಶಾಂಕ್ ಪಿ. (586), ಎನ್. ವಿ. ಭರತ್ ಐತಾಳ್ (586), ಶಶಾಂಕ್ ವೈ.ಬಿ. (586), ಅನಿಕೇತ್ ಕಾಮತ್ ಎಚ್. (585), ನಿಖಿಲ್ ಕೆ.ಪಿ. (585), ನಿಧಿ ಎಸ್. ಶೇಟ್ (584). ದೃಷ್ಟಿ ದಿನೇಶ್ ಶೆಟ್ಟಿ (584), ಸ್ಪೂರ್ತಿ ರೈಕೋಟಿ (584), ಮಹಾಲಕ್ಷ್ಮಿ ಶುಕ್ರಜ್ ಪುಲಪಟ್ಲಿ (584), ಮೇಘಾ ಬಿ.ತಲ್ಲಳ್ಳಿ (584), ಪೃಥ್ವಿ ಎಚ್.ಎಸ್. (584), ಜಯೇಶ್ ತಾರನಾಥ ಶೆಟ್ಟಿ (583), ನಿಶ್ಚಿತಾ ಎಚ್.ಡಿ. (583), ಮೆಘಾನಾ ಹೆಗ್ಡೆ ಎ. (582), ಖುಷಿ ಗಡಿಗೇಪ್ಪ ಚಿತ್ತರಗಿ (582), ಅಕ್ಷಯ್ ಜಿ.ಎಚ್. (582), ಅಮೋಘ ವರ್ಷ ಜಿ.ಜೆ. (582), ವಿಜಯ್ ಕುಮಾರ್ ಪಿ.ಆರ್. (582), ಮೇಘ ರಿಯಾ ರವಿಕುಮಾರ್ (582), ನಿಶಿತ್ ಡಿ. (582), ಬ್ರಿಜ್ವಿನ್ ಬಾಲಕೃಷ್ಣ (581), ಭೂಮಿಕಾ ಎಲ್. (581), ಅಭಿರಾಮಿ ಜಯಕುಮಾರ್ (581), ಸಮೃದ್ಧ್ ಐ.ಎಸ್. (581), ವಸಿಷ್ಠ ಎಲ್. ಸ್ವಾಮಿ (581), ಶ್ರೀಶ್ ಶ್ರೀನಾಥ್ ವೈದ್ಯ (581) ಹಾಗೂ ಪವನ್ ದೇಶಪಾಂಡೆ (581) ಅಂಕ ಪಡೆದು ಕಾಲೇಜಿನ ಟಾಪ್ 33ನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.