ಮಂಗಳೂರು: ಎಕ್ಸ್ ಪರ್ಟ್ ವಿದ್ಯಾರ್ಥಿಗಳ ಇನ್ನೊಂದು ವಿಶೇಷ ಸಾಧನೆ

ಮಂಗಳೂರು: ಶಿಕ್ಷಣ ಸಂಸ್ಥೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಬೋಧನೆ, ಸೂಕ್ತ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಈ ಭಾರಿಯೂ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ.

ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 95 ಅಂಕ ಪಡೆದದವರು ಪಿಯುಸಿಯಲ್ಲಿ ಶೇ. 99, ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 90 ಅಂಕ ಪಡೆದದವರು ಪಿಯುಸಿಯಲ್ಲಿ ಶೇ. 95 ಪಡೆಯುವುದು ಒಂದು ರೀತಿಯ ಸಾಧನೆಯಾದರೆ, ಎಸ್‍ಎಸ್‍ಎಲ್‍ಸಿಯಲ್ಲಿ ಕಡಿಮೆ ಅಂಕ ಪಡೆದರೂ ಪಿಯುಸಿಯಲ್ಲಿ ಶೇ. 80ರಿಂದ ಶೇ 94ರ ವರೆಗೆ ಅಂಕ ಪಡೆಯುವುದು ಇನ್ನೊಂದು ಸಾಧನೆಯಾಗಿದೆ. ಈ ರೀತಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಕ್ಕಿಂತ ಶೇ. 26ರಷ್ಟು ಅಧಿಕ ಅಂಕವನ್ನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಕ್ಸ್ ಪರ್ಟ್  ಅನೇಕ ವಿದ್ಯಾರ್ಥಿಗಳು ಪಡೆದಿದ್ದಾರೆ. ಸಂಸ್ಥೆಯ ಶಿಕ್ಷಣ ಗುಣಮಟ್ಟ, ಬೋಧಕ ಸಿಬ್ಬಂದಿಗಳ ವೈಜ್ಞಾನಿಕ ಬೋಧನಾ ವಿಧಾನ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಎಸ್‍ಎಸ್‍ಎಲ್‍ಸಿಯಲ್ಲಿ ಕಡಿಮೆ ಅಂಕ ಪಡೆದರೂ, ಸಾಧಿಸಬೇಕು ಎಂಬ ಛಲದೊಂದಿಗೆ ನಗರದ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗಿದ್ದಾರೆ. ಈ ಮೂಲಕ ಎಕ್ಸ್ ಪರ್ಟ್ವಿದ್ಯಾರ್ಥಿಗಳು ಯಾವುದೂ ಅಸಾಧ್ಯವಿಲ್ಲ ಎಂಬುದನ್ನು ಸಾಭೀತು ಪಡಿಸಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ಸಾಧನಾ ಶೀಲ ವಿದ್ಯಾರ್ಥಿಗಳ ವಿವರ

ಕೀರ್ತಿ ರೆಡ್ಡಿ ಡಿ.ಕೆ. (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.59, ಪಿಯುಸಿಯಲ್ಲಿ ಶೇ.84.83) ಐಸಿರಿ ಎಂ.ಆರ್. (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.62.6, ಪಿಯುಸಿಯಲ್ಲಿ ಶೇ.87) ಸಚಿನ್ ಬಿ. (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.67.2, ಪಿಯುಸಿಯಲ್ಲಿ ಶೇ.89.83) ಕಾರ್ತಿಕ್ ಜಿ.ಎಲ್. (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.70, ಪಿಯುಸಿಯಲ್ಲಿಶೇ.92) ಅಕ್ಷಯ್ ಎಂ.ಎಚ್. (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.66.6, ಪಿಯುಸಿಯಲ್ಲಿ ಶೇ.87.33), ಗುರುದೇವ್ ಎಂ.ಎನ್. (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.66.8, ಪಿಯುಸಿಯಲ್ಲಿ ಶೇ.87.67) ಮೊಹಮ್ಮದ್ ಜೈಬ್ ನಂದಗಾಂವ್ (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.69.8, ಪಿಯುಸಿಯಲ್ಲಿ ಶೇ.90.50)

ಪರಡ್ಡಿ ಪವನ್ ಅಶೋಕ್ ಕುಮಾರ್ (ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 68.4, ಪಿಯುಸಿಯಲ್ಲಿ ಶೇ. 88.67) ತೇಜಸ್ ರೆಡ್ಡಿ (ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 68.4, ಪಿಯುಸಿಯಲ್ಲಿ ಶೇ.86.50), ಬಿ.ಎಂ. ಸಾಯಿ ಪ್ರತೀಕ್ (ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 75.2, ಪಿಯುಸಿಯಲ್ಲಿ ಶೇ.93), ಸಾಥ್ವಿಕ್ ಕೆ.ಆರ್. (ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 66, ಪಿಯುಸಿಯಲ್ಲಿ ಶೇ.83.33), ಆದಿತ್ಯ ಎಸ್.ರಾಜ್ (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.80, ಪಿಯುಸಿಯಲ್ಲಿ ಶೇ.96.33), ಡಿ.ಜೆ. ಪ್ರಜ್ವಲ್ (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.75, ಪಿಯುಸಿಯಲ್ಲಿ ಶೇ.91.17), ಎಸ್.ವೃಷಾಂಕ್ (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.79.8, ಪಿಯುಸಿಯಲ್ಲಿ ಶೇ.95.33)

ಅಭಿಷೇಕ್ ಬೀರದಾರ್ (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.77.4, ಪಿಯುಸಿಯಲ್ಲಿ ಶೇ.92.83), ಲಿಕಿತ್ ಗೌಡ ಎನ್. (ಎಸ್‍ಎಸ್‍ಎಲ್‍ಸಿಯಲ್ಲಿ ಶೇ.67.8, ಪಿಯುಸಿಯಲ್ಲಿ ಶೇ.83) ಅಂಕ ಪಡೆದಿದ್ದಾರೆ.