ಬೆಂಗಳೂರು: ಟಾಸ್ ಗೆದ್ದ ಶಿವಮೊಗ್ಗ ಬೌಲಿಂಗ್ ಆಯ್ಕೆ ಮಾಡಿಕೊಂಡು ಗುಲ್ಬರ್ಗಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಲಯನ್ಸ್ ಬೌಲಿಂಗ್ ದಾಳಿಗೆ ಸಿಲುಕಿದ ಗುಲ್ಬರ್ಗ ಆರಂಭಿಕ ಆಘಾತ ಎದುರಿಸಿತು. ಮೊದಲ ಓವರ್‌ನಲ್ಲಿಯೇ ಎಲ್.ಆರ್.ಚೇತನ್ ರನೌಟಿಗೆ ಬಲಿಯಾದರು. ನಂತರ ಬಂದ ಸೌರಭ್ ಮುತ್ತೂರ್ ಕೂಡ ವಿ.ಕೌಶಿಕ್‌ಗೆ ವಿಕೆಟ್ ಒಪ್ಪಿಸಿ ಬಹುಬೇಗ ನಿರ್ಗಮಿಸಿದರು. ಮೂರನೇ ವಿಕೆಟ್‌ಗೆ ಆದರ್ಶ್ ಪ್ರಜ್ವಲ್ (43), ಆರ್.ಸ್ಮರಣ್ (40) ಜೊತೆಯಾಟವಾಡಿ 77 ರನ್ ಕಲೆಹಾಕುವ ಮೂಲಕ 10 ಓವರ್‌ಗಳಲ್ಲಿ ತಂಡದ ಸ್ಕೋರ್ ಅನ್ನು 86ಕ್ಕೆ ಕೊಂಡೊಯ್ದರು.
ಮಹಾರಾಜ ಟ್ರೋಫಿ ಟಿ20 ಸರಣಿಯ ಇಂದಿನ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಶಿವಮೊಗ್ಗ ಲಯನ್ಸ್ ತಂಡ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ.ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಶಿವಮೊಗ್ಗ ಲಯನ್ಸ್ 3 ವಿಕೆಟ್ಗಳಿಂದ ಗೆಲುವು ದಾಖಲಿಸಿತು.ಈ ಮೂಲಕ ಟೂರ್ನಿಯಲ್ಲಿ ಅಜೇಯ ಗೆಲುವಿನ ಓಟ ಮುಂದುವರೆಸಿತು.
176 ರನ್‌ಗಳ ಗುರಿ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ ಪರ ಶ್ರೇಯಸ್ ಗೋಪಾಲ್ (52), ಅಭಿನವ್ ಮನೋಹರ್ (28), ಎಸ್.ಶಿವರಾಜ್ (27*), ಎಚ್.ಎಸ್ ಶರತ್ (31*) ರನ್ ಪೇರಿಸಿದರು. ಈ ಮೂಲಕ ತಂಡ 19.5 ಓವರ್‌ಗಳಲ್ಲಿ ಗೆಲುವು ಸಾಧಿಸಿತು.ಈ ಹಂತದಲ್ಲಿ ಪ್ರಜ್ವಲ್ ಅವರು ಕ್ರಾಂತಿ ಕುಮಾರ್ಗೆ ವಿಕೆಟ್ ಒಪ್ಪಿಸಿದರೆ, ಮುಂದಿನ ಓವರ್‌ನಲ್ಲಿ ಶಿವಮೊಗ್ಗ ತಂಡದ ನಾಯಕ ಶ್ರೇಯಸ್ ಗೋಪಾಲ್ ಸ್ಮರಣ್ ವಿಕೆಟ್ ಪಡೆದರು. ಅಮಿತ್ ವರ್ಮಾ (10), ಮ್ಯಾಕ್ನೈಲ್ ನೊರೊನ್ಹಾ (16) ಶ್ರೀನಿವಾಸ್ ಶರತ್ (22*) ಮತ್ತು ಡಿ.ಅವಿನಾಶ್ (19*) ರನ್ ಗಳಿಸುವ ಮೂಲಕ 20 ಓವರ್‌ಗಳಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ 6 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು.
ವಿಕೆಟ್‌ಗಳು ಉರುಳುತ್ತಿದ್ದರೂ ಮತ್ತೊಂದೆಡೆ, ನಾಯಕನ ಆಟವಾಡಿದ ಶ್ರೇಯಸ್ ಗೋಪಾಲ್ (52) ಮತ್ತು ಅಭಿನವ್ ಮನೋಹರ್ (28) ರನ್ ಗಳಿಸುವ ಮೂಲಕ ಶಿವಮೊಗ್ಗದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. 14ನೇ ಓವರ್‌ನಲ್ಲಿ ಶ್ರೇಯಸ್ ಗೋಪಾಲ್ ಎಡಗೈ ಸ್ಪಿನ್ನರ್ ಹಾರ್ದಿಕ್ ರಾಜ್ಗೆ ಬಲಿಯಾದರು. ಅಭಿನವ್ ಮನೋಹರ್ (28) ಔಟಾದ ಬಳಿಕ ಶಿವರಾಜ್ ಜೊತೆಯಾದ ಎಚ್.ಎಸ್.ಶರತ್ ಬಿರುಸಿನ ಬ್ಯಾಟಿಂಗ್ ಮಾಡಿ 11 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 31 ರನ್‌ಗಳ ಕಲೆಹಾಕುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್ ಕಾರ್ಡ್, ಗುಲ್ಬರ್ಗ ಮಿಸ್ಟಿಕ್ಸ್ : ಆದರ್ಶ ಪ್ರಜ್ವಲ್ (43), ಆರ್.ಸ್ಮರಣ್ – (40). ಬೌಲಿಂಗ್ : ಕ್ರಾಂತಿ ಕುಮಾರ್ (3/17), ಶ್ರೇಯಸ್ ಗೋಪಾಲ್ – (1/29).ಶಿವಮೊಗ್ಗ ಲಯನ್ಸ್ : ಶ್ರೇಯಸ್ ಗೋಪಾಲ್ (52), ಎಚ್.ಎಸ್. ಶರತ್ (31). ಬೌಲಿಂಗ್: ವಿಜಯಕುಮಾರ್ ವೈಶಾಕ್ (2/25), ಅಭಿಲಾಷ್ ಶೆಟ್ಟಿ – (2/45)
ಎರಡನೇ ಇನ್ನಿಂಗ್ಸ್‌ನಲ್ಲಿ ಗುಲ್ಬರ್ಗ ಬೌಲರ್‌ಗಳು ಬಿಗಿ ಬೌಲಿಂಗ್ ದಾಳಿ ನಡೆಸಿ ಒಂದರ ಹಿಂದೊಂದರಂತೆ ಶಿವಮೊಗ್ಗದ ವಿಕೆಟ್‌ಗಳನ್ನು ಪಡೆದು ಒತ್ತಡ ಹೇರಿದರು. ಆರಂಭಿಕ ರೋಹನ್ ಕದಂ (12) ರನ್ಗಳಿಸಿ ಗುಲ್ಬರ್ಗಾ ನಾಯಕ ವೈಶಾಕ್ ವಿಜಯ್ ಕುಮಾರ್ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಿಹಾಲ್ ಉಲ್ಲಾಳ್ (4) ರನ್ ಗಳಿಸಿ ಔಟಾದರೆ, ರೋಹಿತ್ ಕುಮಾರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಪ್ರಣವ್ ಭಾಟಿಯಾ (4), ಕ್ರಾಂತಿ ಕುಮಾರ್ (6) ರನ್‌ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ 6 ಓವರ್‌ಗಳ ಅಂತ್ಯದ ವೇಳೆಗೆ ಶಿವಮೊಗ್ಗ ಲಯನ್ಸ್ 5 ವಿಕೆಟ್ ಕಳೆದುಕೊಂಡು 43 ರನ್ ಗಳಿಸಿತ್ತು.