ಕುಂದಾಪುರ: ಕುಂದಾಪುರ ಹಾಲಾಡಿ ರಸ್ತೆಯ ಸುಣ್ಣಾರಿ ಎಕ್ಸಲೆಂಟ್ ಹೈ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಆನ್ ಲೈನ್ ತರಗತಿಗಳು ಆರಂಭವಾಗಿವೆ.
ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ:
ಪ್ರೌಢಶಾಲಾ ವಿಭಾಗದ ಎಲ್ಲಾ ವಿಷಯಗಳು ಪದವಿಪೂರ್ವ ವಿಭಾಗದ ಸೈನ್ಸ್ ಹಾಗೂ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಬೇತಿ ಆರಂಭಿಸಲಾಗಿದೆ. ಅದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ಜೆಇಇ ಮತ್ತು ನೀಟ್ ತರಬೇತಿಗಳನ್ನು ಪ್ರಾರಂಭಿಸಲಾಗುವುದು. ರಜಾ ವೇಳೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಮುಂದಿನ ಅಭಿವೃದ್ಧಿಗಾಗಿ ಆನ್ ಲೈನ್ ಮೂಲಕವೇ ಕಿರು ಪರೀಕ್ಷೆಯನ್ನು ನಡೆಸಲಾಗುತ್ತದೆ.
ನುರಿತ ಶಿಕ್ಷಕರಿಂದ ತರಬೇತಿ:
ಕೊರೊನಾ ಲಾಕ್ ಡೌನ್ ಜಾರಿಯಾಗಿರುವ ಹಿನ್ನೆಲೆ ವಿದ್ಯಾರ್ಥಿಗಳ ಸರ್ವರೀತಿಯ ಹಿತದೃಷ್ಟಿಯಿಂದ ಕಾಲೇಜಿನ ಸೈನ್ಸ್ ಮತ್ತು ವಾಣಿಜ್ಯ ತರಗತಿಗಳನ್ನು ನುರಿತ ಉಪನ್ಯಾಸಕರಿಂದ ಹಾಗೂ ಹೈಸ್ಕೂಲ್ ವಿಭಾಗದ ತರಗತಿಗಳಿಗೆ ಪರಿಣತಿ ಹೊಂದಿದ ಶಿಕ್ಷಕರಿಂದ ತರಗತಿಗಳು ಆರಂಭಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆ ಅಧ್ಯಯನಕ್ಕಾಗಿ ವಿಶೇಷ ಸಮಯವನ್ನು ಮೀಸಲಿಡಲು ಇದು ಸಹಕಾರಿಯಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.