ಹೆಬ್ರಿ: ಇಲ್ಲಿಗೆ ಸಮೀಪದ ಮುನಿಯಾಲು ಸಂಜೀವಿನಿ ಡೈರಿ ಮತ್ತು ಫಾರ್ಮ್ ಗೋಧಾಮಕ್ಕೆ ಅಹಮದಾ ಬಾದ್ ಮಾಜಿ ಮೇಯರ್ ಗೌತಮ್ ಶಾ ಭೇಟಿ ನೀಡಿ ಗೋಧಾಮವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಗೋಧಾಮವನ್ನು ಪುರಾತನ ಕಲ್ಪನೆಯಲ್ಲಿ ಆಧುನಿಕವಾಗಿ ನಿರ್ಮಿಸಿ ಕೃಷಿ, ಪ್ರವಾಸೋಧ್ಯಮ ತಾಣವಾಗಿ ನಿರ್ಮಿಸಿ ಅಂತರಾಷ್ಟ್ರೀಯ ಖ್ಯಾತಿ ನೀಡಿರುವುದಕ್ಕೆ ಖುಷಿ ಪಟ್ಟರು. ಬಳಿಕ ಗೋಧಾಮದಲ್ಲಿ ವಿಹಾರ ಮಾಡಿ ಗೋಪೂಜೆ ಸಲ್ಲಿಸಿದರು.
ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ಸ್ ಮತ್ತು ಡೈರಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಮತ್ತು ಸವಿತಾ ರಾಮಕೃಷ್ಣ ಆಚಾರ್ ಗೋಧಾಮದ ಉದ್ದೇಶವನ್ನು ವಿವರಿಸಿದರು.
ದೆಹಲಿಯ ಪ್ರದೀಪ್ ಖೇಡಿಯ ಸಹಿತ ಹಲವರು ಹಾಜರಿದ್ದರು.












