ಎಲ್ಲೆಡೇ ಗಣೇಶ ಚತುರ್ಥಿಯ ಸಂಭ್ರಮ, ವಿಘ್ನ ನಿವಾರಣೆಗೆ ಬಂದ ಮಹಾಗಣಪ.

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ಎನ್ನುವಂತೆ ದೇವರೇ ತಿರುಚಿದ ಕಾಂಡವನ್ನು ಹೊಂದಿರುವ, ವಿಶಾಲವಾದ ದೇಹವು, ಸಹಸ್ರ ಸೂರ್ಯರಂತೆ ತೇಜಸ್ವಿಯನ್ನು ನನ್ನ ಎಲ್ಲಾ ಕೆಲಸಗಳಲ್ಲಿ ಮತ್ತು ಎಲ್ಲಾ ಸಮಯದಲ್ಲೂ ಅಡಚಣೆಗಳು ಮತ್ತು ತೊಂದರೆಗಳಿಂದ ನನ್ನನ್ನು ಪಾರು ಮಾಡು ಎಂದು ಬೇಡಿಕೊಳ್ಳುವ ಪ್ರಾರ್ಥನೆ ಇದಾಗಿದೆ, ಇದರ ಅರ್ಥವನ್ನು ಮಕ್ಕಳಿಗೆ ಮನದಟ್ಟು ಮಾಡುವ ಈ ಉದ್ದೇಶದಿಂದಲೇ ಇವುಗಳನ್ನೆಲ್ಲ ಶಾಲಾ ಪಠ್ಯಗಳಲ್ಲಿ, ಪ್ರಾರ್ಥನೆಗಳಲ್ಲಿ ಸೇರಿಸಲಾಗುತಿತ್ತು ಆದರೆ ಈಗಿನ ಮಕ್ಕಳಿಗೆ ಕನ್ನಡ ಪ್ರಾರ್ಥನೆಗಳೇ ಗೊತ್ತಿಲ್ಲ ಅದರ ಅರ್ಥವಂತೂ ತಿಳಿದೇ ಇಲ್ಲ. ಆದರೂ 

ಗಣೇಶ ಚತುರ್ಥಿ ಬಂತೆಂದರೆ ಸಾಕು ನಮಗೆಲ್ಲಾ ಆಗುವ ಭಾವವೊಂದು ಹಿಂದೊಂದು ದಿನ ಇತ್ತಲ್ಲ ಅದೆಲ್ಲ ಈಗಿಲ್ಲ ಅನ್ಸತ್ತೆ ಕಾರಣಾಂತರಗಳಿಂದ ಹಲವು ಬದಲಾವಣೆಗಳೊಂದಿಗೆ ಮಾರ್ಪಾಡಾಗಿ ಬೇರೆಯ ರೂಪವನ್ನೇ ಪಡೆದುಕೊಂಡಿದೆ. ಆದರೆ ಗಣೇಶ ಆಚರಣೆಗೆ ಯಾವುದೇ ಕೊರತೆಗಳಿಲ್ಲ ಆಚರಣೆಯೊಂದಿಗೆ ಆಡಂಬರಗಳು ಜಾಸ್ತಿಯಾಗಿವೆ ಅಷ್ಟೇ

ಆಧುನಿಕತೆ ಹೆಚ್ಚಾದಂತೆಲ್ಲ ಅದರೊಂದಿಗೆ ತಾಂತ್ರಿಕತೆಯೂ ಹೆಚ್ಚಾಗಿದೆ ಅದೆಲ್ಲರ ಮಧ್ಯೆ ಅಲ್ಲಲ್ಲಿ ಸುಳಿದಾಡುವ ಪರಿಸರ ಸ್ನೇಹಿ, ಇ ಅನ್ನುವ ಅಕ್ಷರದೊಂದೇ ಬರುವ ಎಲ್ಲಾ ಎಲೆಕ್ಟ್ರಿಕ್ ವಸ್ತುಗಳು ಈ ವ್ಯವಸ್ಥೆಯಲ್ಲೇ ಪರಿಸರ ಸ್ನೇಹಿಯಾದ ನಮ್ಮ ವಿಘ್ನ ವಿನಾಶಕ . ಗಣೇಶನನ್ನು ಪರಿಸರ ಸ್ನೇಹಿಮಾಡಿರುವುದೇನೋ ಸರಿ ಆದರೆ ಅವನ ಪೂಜೆಗೆ ಅಷ್ಟೊಂದು ಆಡಂಬರದ ಅವಶ್ಯಕತೆಯೇನೂ ಇರಲಿಲ್ಲ ಅಲ್ಲವೇ! ಹೌದು ನಾವೆಲ್ಲ ಚಿಕ್ಕವರಿರುವಾಗ ಮನೆಯಲ್ಲಿ ಗಣೇಶ ಚತುರ್ಥಿ ಹೇಗೆಲ್ಲಾ ನಡೆಯುತಿತ್ತು ಅದೊಂದು ಖುಷಿಯೇ ಬೇರೆ ಗಣೇಶನನ್ನು ತಂದು ಕೂರಿಸುವುದರಿಂದ ಹಿಡಿದು ವಿಸರ್ಜನೆ ಆಗುವವರೆಗೂ ಅದೊಂದು ವಿಭಿನ್ನ ಲೋಕವನ್ನೇ ಸೃಸ್ಟಿಸುತಿತ್ತು. ಆದರೆ ಈಗಿನ ಗಣೇಶನ ಮೆರವಣಿಗೆಗೆಳು ಹಾಗಲ್ಲ ಡಿಜೆಗಳೊಂದಿಗೆ ಶುರುವಾಗಿ ಡಿಜೆಗಳೊಂದಿಗೆಯೇ ಮುಗಿಯುತ್ತದೆ. ಇವುಗಳೇ ಈಗಿನ ಆಡಂಬರದ ಲೋಕವನ್ನೇ ಹೆಚ್ಚುಗೊಳಿಸಿದ್ದು , ಯಾವುದೇ ಹಬ್ಬ, ಆಚರಣೆ, ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳು ಬಂದರೂ ಅಷ್ಟೇ ಶುರುವಾಗುವುದು ಇಲ್ಲಿಂದಲೇ. ಸಂಭ್ರಮವೇನೋ ಸರಿ ಆದರೆ ಅದರಿಂದ ಅದೆಷ್ಟೋ ಅಪಾಯಗಳು ಸಂಭವಿಸಿರುವುದು ನಮ್ಮ ಮುಂದೆ ಉದಾಹರಣೆಗಳು ಇವೆ. ಕಣ್ಣು ಮುಂದಿರುವ ದೇವರ ಆಚರಣೆಗಳಿಗಿಂತ ಅವನ ಹಿಂದೆ ನಡೆಯುವ ಆಚರಣೆಗಳೇ ಜಾಸ್ತಿ.

ಅದೆಲ್ಲದರ ಮಧ್ಯೆ ಭಕ್ತಿಯಿಂದ ಆಚರಿಸುವ ಆಚರೆಣೆಗೆ ನಾವೆಲ್ಲ ಶರಣಾಗೋಣ. ಗಣೇಶನ ಜನ್ಮ ವೃತ್ತಾಂತದ ಕುರಿತು ನಾವೆಲ್ಲ ಚಿಕ್ಕವರಿದ್ದಾಗಿಂದಲೂ ಕೇಳಿಕೊಂಡು ಬರುತ್ತಲೇ ಇದ್ದೇವೆ. ಗಣಪತಿ ಶಿವ ಪಾರ್ವತಿಯರ ಮಗ. ಕೇವಲ ಪಾರ್ವತಿಯ ಮುದ್ದುಮಗನೆನ್ನುವುದೇ ಹೆಚ್ಚು ಸಮರ್ಪಕವೆನಿಸುತ್ತದೆ. ಏಕೆಂದರೆ ಅವಳ ಸ್ನಾನ ಚೂರ್ಣದಿಂದ ಈತ ಮೈದಾಳಿ, ಅವಳ ಸ್ನಾನಜಲದೊಂದಿಗೆ ಗಂಗಾಮುಖವನ್ನು ಸೇರಿ. ಅಲ್ಲಿ ಗಜಮುಖಳಾದ ಮಾಲಿನಿಯೆಂಬ ದೇವತೆಯ ಗರ್ಭವನ್ನು ಸೇರಿ ಚತುರ್ಭುಜ ಮತ್ತು ಪಂಚಗಜಮುಖಗಳಿಂದ ಜನಿಸಿದನಂತೆ ಗಣೇಶ ಎಂದು ಪುರಾಣಗಳ ಪ್ರಕಾರ ತಿಳಿದು ಬರುತ್ತದೆ.

ಗಣೇಶ ಚತುರ್ಥಿಯೂ ಪ್ರತಿಷ್ಠಾಪನೆ, ಶೋಡಶೋಪಚಾರ, ಉತ್ತರಪೂಜೆ ಮತ್ತು ವಿಸರ್ಜನೆ ಪೂಜೆ ಎಂಬ ನಾಲ್ಕು ಮುಖ್ಯ ಆಚರಣೆಗಳನ್ನು ಹೊಂದಿದೆ. ಗಣೇಶ ಚತುರ್ಥಿ ಭಾರತದಲ್ಲಿ, ಅದರಲ್ಲಿಯೂ ವಿಶೇಷವಾಗಿ ಕರ್ನಾಟಕ, ಮಹಾರಾಷ್ಟ್ರ, ಮತ್ತು ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಂತಹ ಇತರ ರಾಜ್ಯಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಗಣೇಶನನ್ನು ಎಲ್ಲಾ ದೇವಾ ದೇವತೆಗಳಿಗಿಂತ ಮೊದಲು ಪೂಜಿಸಲಾಗುತ್ತದೆ.ನಂಬಿಕೆಯ ಪ್ರಕಾರ, ಗಣೇಶನನ್ನು ವಿಘ್ನಹರ್ತ ಎಂದೂ ಕರೆಯಲಾಗುತ್ತದೆ ಮತ್ತು ಈ ಕಾರಣದಿಂದ ಎಲ್ಲಾ ಆಚರಣೆಗಳು ಅವನ ಆರಾಧನೆಯೊಂದಿಗೆ ಪ್ರಾರಂಭವಾಗುತ್ತವೆ. ಈ ಹಬ್ಬದ ಸಲುವಾಗಿ ತಿಂಗಳುಗಳ ಮುಂಚಿತವಾಗಿಯೇ ಗಣೇಶನ ವಿಗ್ರಹಗಳ ತಯಾರಿಯೂ ಪ್ರಾರಂಭವಾಗುತ್ತವೆ.

ಅಲ್ಲದೇ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅಂತ್ಯಂತ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಕರಾವಳಿ ಪ್ರದೇಶದಲ್ಲಿ ತನ್ನದೇ ಆದ ಪರಂಪರೆ ಹೊಂದಿದೆ. ಇಲ್ಲಿ ಡೊಳ್ಳು ಕುಣಿತ,ಹುಲಿವೇಷ, ಯಕ್ಷಗಾನ ಮುಂತಾದವು ಇಲ್ಲಿನ ಗಣೇಶೋತ್ಸವಕ್ಕೆ ಮೆರಗು ತರುತ್ತದೆ. ಕುಂದಾಪುರ, ಶಿರೂರು, ಮಂಗಳೂರು, ಉಡುಪಿ ಮುಂತಾದ ಕಡೆಯಲ್ಲಿ ಸುಂದರವಾದ ಸಂಭ್ರಮದ ಗಣೇಶ ಚತುರ್ಥಿ ನಡೆಯುತ್ತದೆ.

-ಪ್ರಿಯದರ್ಶಿನಿ.ಆರ್.ಮುಜಗೊಂಡ