ಪಡುಬಿದ್ರಿ: ಈ ಭಾರಿಯ ಪರ್ಯಾಯದಲ್ಲಿ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಪರ್ಯಾಯ ಸರ್ವಜ್ಞ ಪೀಠ ವೇರಲಿದ್ದಾರೆ ಎಂದು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಗಳು ಹೇಳಿದರು.
ಸೋಮವಾರ ಅದಮಾರು ಮೂಲ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಗುರುಗಳು ಹಾಕಿಕೊಟ್ಟ ಕ್ರಮದಂತೆ ಈ ಬಾರಿಯ ಪರ್ಯಾಯ ಪೀಠವನ್ನು ಕಿರಿಯ ಶ್ರೀಗಳು ಏರಲಿದ್ದಾರೆ. ವಿಶ್ವಪ್ರಿಯ ತೀರ್ಥರು, ೧೯೫೬-೫೮, ೧೯೭೨-೭೪ರಲ್ಲಿ ವಿಭುದೇಶ ತೀರ್ಥರು ಪರ್ಯಾಯ ನಡೆಸಿ ನಮ್ಮನ್ನು ೧೯೮೮-೯೦ರಲ್ಲಿ ಪರ್ಯಾಯ ಪೀಠವೇರಲು ಅವಕಾಶ ಕಲ್ಪಿಸಿದ್ದರು. ೨೦೦೪-೦೬ ಎರಡನೆ ಪರ್ಯಾಯವನ್ನು ನಡೆಸಿದ್ದೇವೆ ಎಂದ ಅವರು, ನನಗಿಂತ ಉತ್ತಮವಾಗಿ ನಡೆಸುತ್ತಾರೆ ಎಂಬ ಧೈರ್ಯಭಾವನೆಯಿದೆ ಎಂದರು.
ಪೀಠದಲ್ಲಿ ಯಾರು ಕುಳಿತರೇನು ನಮ್ಮಿಬ್ಬರ ಸಂಕಲ್ಪವೊಂದೇ, ಕೃಷ್ಣ ಮಾಹಾಪೂಜೆ ಸಾಂಗವಾಗಿ ನೆರವೇರಬೇಕು. ಲೋಕ ಕ್ಷೇಮವಾಗಬೇಕು. ಕೃಷ್ಣನಿಗೆ ಯಾವಕಾಲಕ್ಕೆ ಸಮಾಜಕ್ಕೆ ಏನು ಕೊಡಬೇಕೆಂದು ಗೊತ್ತಿದೆ. ಅದನ್ನು ಕಾಲಕಾಲಕ್ಕೆ ಕೊಡುತ್ತಾನೆ ನಮ್ಮ ಹಿಂದಿನ ಪರ್ಯಾಯದ ಬಳಿಕದ ಯಾವುದೇ ಪರ್ಯಾಯ ಮೆರವಣಿಗೆ, ದರ್ಬಾರಿನಲ್ಲಿ ಪಾಲ್ಗೊಂಡಿಲ್ಲ. ಈ ಬಾರಿಯೂ ಪರ್ಯಾಯ ಮೆರವಣಿಗೆ ಸಹಿತ ದರ್ಬಾರಿನಲ್ಲಿ ಪಾಲ್ಗೊಳ್ಳುವುದಿಲ್ಲ. ನನ್ನ ಗುರುಗಳೂ ಅದೇ ರೀತಿ ಮಾಡಿದ್ದರು. ನಾನು ಉಡುಪಿಯಲ್ಲಿಯೇ ಇರುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಹಿಂದೆ ಮುಂದೆ ಮಾತಾಡುವವರೇ ಜಾಸ್ತಿ:
ಉಡುಪಿ ಜನ ನಾನಾ ರೀತಿಯಲ್ಲಿ ಮಾತಾಡುತ್ತಾರೆ, ೫೦೦-೬೦೦ ವರ್ಷದಿಂದಲೂ ನಡೆಯುತ್ತಾ ಬಂದಿದೆ. ಅದನ್ನೇ ನೋಡಿಕೊಂಡು ದಾಸರು ಹಾಡು ಮಾಡಿದ್ದು, ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ಅಂದೇ ಹೇಳಿದ್ದಾರೆ. ಜನ ಖುಷಿ ಬಂದಂತೆ ಮಾತಾಡಲು ಆರಂಭಿಸಿದ್ದಾರೆ. ಅಂದು ಅದನ್ನು ತಡೆದುಕೊಳ್ಳಲಾಗದೆ ಇನ್ನೊಂದು ಹಾಡು ರಚಿಸಿದ್ದರು.
ಹಂದಿಯಿಂದ್ದೆರೆ ಹೇಂಗೆ ಕೇರಿ ಶುದ್ಧಿಯೋ ಹಾಂಗೆ ನಿಂದಕರಿರಬೇಕು ಎಂಬ ಹಾಡು ಈಗಿನ ಕಾಲಕ್ಕೂ ಲಗಾವು ಆಗುತ್ತದೆ. ಸಮಾಜದಲ್ಲಿನಲ್ಲಿ ನನ್ನದೊಂದು ಕೋರಿಕೆ ಸಂಬಂಧ ಪಡದ ವಿಷಯವನ್ನು ಮಾತನಾಡಬಾರದು. ಮಾತಾಡುವುದಿದ್ದರೂ ಕೂಲಂಕಷವಾಗಿ ಹಿಂದೆ ಮುಂದೆ ವಿಮರ್ಶಿಸಿ ಮಾತಾಡಬೇಕು.
ಇಲ್ಲದಿದ್ದರೆ ಪೌರತ್ವದ ಬಗ್ಗೆ ಗಲಾಟೆ ಮಾಡಿದಂತಾಗುತ್ತದೆ, ಗಲಾಟೆ ಮಾಡಿದವರಲ್ಲಿ ಕೇಳಿದರೆ ಏನೂ ತಿಳಿದಿರುವುದಿಲ್ಲ. ಸಾಮಾಜಿಕ ವಿಷಯವನ್ನು ಮಾತಾಡಿದರೆ ಈ ರೀತಿ ದೇಶಕ್ಕೆ ಅನಾಹುತವಾಗುತ್ತದೆ. ಅದರಲ್ಲೂ ಆಧ್ಯಾತ್ಮಿಕ ವಿಷಯದಲ್ಲಿ ಖುಷಿ ಬಂದಂತೆ ನಾಲಿಗೆ ಹರಿಬಿಟ್ಟರೆ ಅವರ ಆತ್ಮಕ್ಕೆ ತೊಂದರೆಯಾಗುತ್ತದೆ. ಇನ್ನು ಮುಂದೆ ಆದರೂ ಸಮಾಜ ಪೀಠದ ಬಗ್ಗೆ, ಆಧ್ಯಾತ್ಮಿಕವಾದ ವಿಷಯದಲ್ಲಿ ಮಾತಾಡುವಾಗ ಮೊದಲು ವಿಮರ್ಶಿಸಿ
ಹೌದೆಂದಾರೆ ಮಾತಾಡಬೇಕು ಎಂದು ಸಂದೇಶ ಕೊಡುತ್ತಿದ್ದೇನೆ ಎಂದರು.
ದರ್ಬಾರು ಸಮಯ ಬದಲಾವಣೆ:
ಹಿರಿಯ ಶ್ರೀಗಳ ಆಜ್ಞೆಯಂತೆ ಪರ್ಯಾಯ ನಡೆಸುತ್ತೇನೆ. ಸಂಪ್ರಾದಯಕ್ಕೆ ತೊಡಕಾಗದಂತೆ ಬಡಗು ಮಾಳಿಗೆಯಲ್ಲಿ ಅರಳುಗದ್ದಿಗೆ ಸಹಿತ ಒಳಗಿನ ಕಾರ್ಯಗಳು ನಡೆಯಲಿದೆ. ಒಳಗಿನ ಪೂಜೆಗಳ ಬಳಿಕ ದರ್ಬಾರು ನಡೆಯಲಿದೆ ಎಂದು ಶ್ರೀ ಈಶಪ್ರಿಯ ತೀರ್ಥರು ತಿಳಿಸಿದರು.
ರಾತ್ರಿಯಿಡಿ ನಿದ್ದೆ ಬಿಟ್ಟ ಜನರ ಅನುಕೂಲತೆ ದೃಷ್ಟಿಯಿಂದ ಎಲ್ಲಾ ಸ್ವಾಮೀಜಿಗಳ ಒಪ್ಪಿಗೆಯಂತೆ ಪರ್ಯಾಯ ದರ್ಬಾರು ಸಮಯ ಬದಲಾವಣೆ ಮಾಡಲಾಗಿದೆ. ಇದು ನಿರೆಂತರವೆಂದೇನಿಲ್ಲ. ಪ್ರಯೋಗ ಹೊಸದಾಗಿದ್ದರಿಂದ ಸಾಧಕ-ಬಾಧಕಗಳನ್ನರಿತು ಮುಂದುವರಿಸಲು ಬಹುದು.
ಆಚರಣೆ ಸಹಿತ ಪ್ರತಿಯೊಂದಕ್ಕೂ ದೊಡ್ಡ ಮಹತ್ವವಿದೆ. ವಿರಕ್ತನಾದವನಿಗೆ ನನ್ನದು ಅಂತ ಯಾವುದು ಇಲ್ಲ. ಭಕ್ತವರ್ಗ ಅವನನ್ನು ತುಂಭಾ ಶ್ರೇಷ್ಠ ಎಂದಿರುವಾಗ ಅವನ ಅನುಸಂಧಾನ ಹೇಗಿರಬೇಕು. ಪಲ್ಲಕಿಯನ್ನು ಎತ್ತುವಾಗ ನನ್ನನ್ನಲ್ಲ ನನ್ನೊಳಗಿನ ಶಕ್ತಿಯನ್ನು ಗೌರವಿಸುತ್ತೇವೆ ಎನ್ನುವ ಭಾವನೆ ಅವರಲ್ಲಿರಬೇಕು. ಅದರಲ್ಲಿ ವ್ಯಕ್ತಿಯಲ್ಲ ಭಗವಂತನ ಸನ್ನಿಧಾನವಿದೆ ಎಂಬ ಚಿಂತನೆ ಭಕ್ತರಲ್ಲಿರುತ್ತದೆ ಎಂದರು.
ಕಾಲ್ನಡಿಗೆಯಲ್ಲಿಯೇ ಪುರಪ್ರವೇಶ :
ಪುರಪ್ರವೇಶ ಕಾಲ್ನಡಿಗೆ ನನ್ನ ಇಚ್ಚೆ ಭಕ್ತರ ಇಚ್ಚೆ ಟ್ಯಾಬ್ಲೋ ಈ ಬಗ್ಗೆ ಹೊಯ್ದಾಟ ನಡೆಯುತ್ತಿದೆ. ಟೀಕೆಗಳಿಂದಾಗಿ ಪೇಜಾವರ ವಿಶ್ವೇಶ ತೀರ್ಥರು ಮಾನವ ಹೊರುವ ಪಲ್ಲಕಿ ಮೆರವಣಿಗೆಗೆ ತಿಲಾಂಜಲಿ ಇತ್ತಿದ್ದರು ಎಂದ ಮಾಧ್ಯಮದವರ ಪ್ರಶ್ನೆಗೆ ಸ್ವಾಮೀಜಿ, ಮಾತಾಡದೇ ಕುಳಿತರೆ ಅವನೇನು ಮಾತಾಡುವುದಿಲ್ಲ. ಮಾತಾಡಿದರೆ ತುಂಬಾ ಮಾತಾಡುತ್ತಾನೆ. ಬೈಯುದಕ್ಕೂ ನಿಮ್ಮ ಅನುಸಂದಾನ ಬೇಕು ಎಂದಷ್ಟೇ ಹೇಳಿದರು.