ಮಂಗಳೂರಿನ ರಸ್ತೆಯಲ್ಲಿ ಮೋದಿ… ಮೋದಿ… ಪಠಣ.. ಹರಿದು ಬಂದ ಜನಸಾಗರ

ಚಿತ್ರಕೃಪೆ: ಎ.ಎನ್.ಐ

ಮಂಗಳೂರು: ನಿರೀಕ್ಷೆಯಂತೆಯೆ ಮಂಗಳೂರಿನ ಜನತೆ ಈ ಬಾರಿಯೂ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರಧಾನಿ ಮೋದಿಗೆ ಮೋದಿ ಪಠಣದ ಸ್ವಾಗತ ಕೋರಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಕೂಳೂರಿನ ಗೋಲ್ಡ್ ಫಿಂಚ್ ಸಿಟಿಗೆ ಹೋಗುವ ರಸ್ತೆಗಳಲ್ಲಿ ಬಿಸಿಲನ್ನೂ ಲೆಕ್ಕಿಸದೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಹಿಂದಿನ ಬಾರಿಯೂ ಮೋದಿಯವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಇದೇ ರೀತಿ ಜನಸಾಗರ ಹರಿದು ಬಂದಿತ್ತು, ಮತ್ತು ಇದನ್ನು ಮೋದಿ ಅವರು ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಬಾರಿಯೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಪೊಲೀಸರು ಜನರನ್ನು ಹದ್ದು ಬಸ್ತಿನಲ್ಲಿಡಲು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದವು.