ಮಂಗಳೂರು: ಮಂಗಳೂರಿನ ಎಜೆ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಪಿ.ದೇವನ್ ಅವರಿಗೆ ಪ್ರತಿಷ್ಠಿತ ‘ಗೋಲ್ಡನ್ ಏಮ್’ ಪ್ರಶಸ್ತಿ ಲಭಿಸಿದೆ. 11 ನೇ ಆವೃತ್ತಿಯ ಗೋಲ್ಡನ್ ಏಮ್ ಸಮ್ಮೇಳನವನ್ನು ಬೆಂಗಳೂರಿನ ಡೈನರ್ಜಿಕ್ ಬಿಸಿನೆಸ್ ಸೊಲ್ಯೂಷನ್ಸ್ ಆಯೋಜಿಸಿತ್ತು.
ಸುಮಾರು ಒಂದು ದಶಕದ ಕಾಲ ಇಎನ್‌ಟಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಪಿ.ಪಿ. ದೇವನ್ ಅವರಿಗೆ ‘ಮೋಸ್ಟ್ ಟ್ರಸ್ಟೆಡ್ ಹೆಲ್ತ್‌ಕೇರ್ ಲೀಡರ್‌ಶಿಪ್ -ಇಎನ್‌ಟಿ ಸ್ಪೆಷಲಿಸ್ಟ್ ಆಫ್ ಎಮಿನೆನ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.












