ನಿಟ್ಟೆ ಕಾಲೇಜಿನಲ್ಲಿ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮ

ನಿಟ್ಟೆ:ಪ್ರತಿಯೊಂದು ಸಂಸ್ಥೆಯ ಏಳಿಗೆಯಲ್ಲಿ ಅಲ್ಲಿನ ಪ್ರತಿಯೊಬ್ಬ ಸಿಬ್ಬಂದಿಯ ಪಾತ್ರವೂ ಅತಿಮುಖ್ಯ ಎಂದು ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಂ. ವೆಂಕಟೇಶ್ ಅವರು ಅಭಿಪ್ರಾಯಪಟ್ಟರು.

ಅವರು ಸೆ.13 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಶಿಕ್ಷಕ ಹಾಗೂ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. “ನಾನು, ನನ್ನದು ಎಂಬ ತನವನ್ನು ಬಿಟ್ಟು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಶ್ರಮವಹಿಸಿ ಕೆಲಸ ಮಾಡಬೇಕು. ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಕಾಣುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸಮಾಡಬೇಕು” ಎಂದು ಅವರು ಹೇಳಿದರು.

2020-21 ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದ ಬಯೋಟೆಕ್ನಾಲಜಿ ವಿಭಾಗದ ಸಹಪ್ರಾಧ್ಯಾಪಕ ಡಾ| ವೆಂಕಟೇಶ್ ಕಾಮತ್, ಸಹಪ್ರಾಧ್ಯಾಪಕಿ ಡಾ| ಉಳ್ಳಾಲ್ ಹರ್ಷಿಣಿ ದೇವಿ, ಸಿವಿಲ್ ವಿಭಾಗದ ಸಹಪ್ರಾಧ್ಯಾಪಕ ಡಾ| ಶ್ರೀರಾಮ್ ಮರಾಠೆ, ಕಂಪ್ಯೂಟರ್‌ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ರಾಧಾಕೃಷ್ಣ, ಸಹಪ್ರಾಧ್ಯಾಪಕಿ ಡಾ| ಶಬರಿ ಶೇಡ್ತಿ, ಇಲೆಕ್ಟಿçಕಲ್ ವಿಭಾಗದ ಸಹಪ್ರಾಧ್ಯಾಪಕಿ ಡಾ| ಸಿಫಾ ಕ್ರೆಸಿಲ್ ಡಯಾಸ್, ಅಸೋಸಿಯೇಟ್ ಪ್ರೊಫೆಸರ್ ಡಾ| ನಯನಾ ಶೆಟ್ಟಿ, ಸಹಪ್ರಾಧ್ಯಾಪಕಿ ಡಾ| ಕೆ ಲತಾ ಶಣೈ, ಇನ್ಫೋರ್ಮೇಶನ್‌ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ| ಬೋಳ ಸುನಿಲ್ ಕಾಮತ್, ಡಾ| ಜೇಸನ್ ಎಲ್ರಾಯ್ ಮಾರ್ಟಿಸ್, ಮೆಕ್ಯಾನಿಕಲ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ಅನಂತಕೃಷ್ಣ ಸೋಮಯಾಜಿ, ಸಹಪ್ರಾಧ್ಯಾಪಕ ಡಾ| ವಿದ್ಯಾಸಾಗರ್ ಶೆಟ್ಟಿ, ಡಾ| ಶರತ್‌ಚಂದ್ರ, ಡಾ| ವೀರೇಶ್ ಆರ್.ಕೆ, ಅಸೋಸಿಯೇಟ್ ಪ್ರೊಫೆಸರ್ ಡಾ| ವೇಣುಗೋಪಾಲ್ ಟಿ.ಆರ್, ಎಂ.ಸಿ.ಎ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ಮಮತಾ ಬಲಿಪ, ಸಹಪ್ರಾಧ್ಯಾಪಕಿ ಡಾ| ಮಂಗಳ ಶೆಟ್ಟಿ, ಹ್ಯುಮ್ಯಾನಿಟೀಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ವಿಶ್ವನಾಥ ಸನ್ಮಾನ ಸ್ವೀಕರಿಸಿದರು.

ಇಂಜಿನಿಯರ್  ದಿನಾಚರಣೆ  ಅಂಗವಾಗಿ ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಂ. ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ| ಐ ರಮೇಶ್ ಮಿತ್ತಂತಾಯ ಅತಿಥಿಯನ್ನು ಪರಿಚಯಿಸಿದರು. ಡಾ| ಸುಬ್ರಹ್ಮಣ್ಯ ಭಟ್, ಡೀನ್ ಸ್ಟೂಡೆಂಟ್ ವೆಲ್ಫೇರ್ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ನಿಟ್ಟೆ ಕ್ಯಾಂಪಸ್‌ನ ರಿಜಿಸ್ಟಾçರ್ ಎ.ಯೋಗೀಶ್ ಹೆಗ್ಡೆ ವಂದಿಸಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ| ಗ್ರೆöÊನಲ್ ಕಾರ್ಯಕ್ರಮ ನಿರೂಪಿಸಿದರು.