ದೇಶದ ಪ್ರಗತಿ, ಅಭಿವೃದ್ಧಿ ಹಾಗೂ ಆರ್ಥಿಕ ಸದೃಢತೆಗೆ ಇಂಜಿನಿಯರ್ಗಳ ಪಾತ್ರ ಅತ್ಯಂತ ಮಹತ್ವದ್ದು. ಇಂಜಿನಿಯರಿಂಗ್ ಎಂದರೆ ಪರಿಶ್ರಮ, ಕ್ರಿಯಾಶೀಲತೆ ಮತ್ತು ವಿಜ್ಞಾನವನ್ನು ಸಮರ್ಥವಾಗಿ ಬಳಸಿ ಸಮಾಜಕ್ಕೆ ಉಪಯುಕ್ತ ಪರಿಹಾರಗಳನ್ನು ನೀಡುವುದು. ಇಂಜಿನಿಯರ್ಗಳ ಸೇವೆಯನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ಸ್ ಡೇ ಅನ್ನು ಆಚರಿಸಲಾಗುತ್ತದೆ.



ಈ ದಿನವನ್ನು ಭಾರತದ ಮಹಾನ್ ಇಂಜಿನಿಯರ್ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. 1861ರ ಸೆಪ್ಟೆಂಬರ್ 15ರಂದು ಜನಿಸಿದ ಅವರು ಜೀವನದೊಳಗೆ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟು, ಜೋಗದ ಶರಾವತಿ ವಿದ್ಯುತ್ ಯೋಜನೆ, ಮೈಸೂರು ಸ್ಯಾಂಡಲ್ ಸೋಪ್, ಭದ್ರಾವತಿ ಉಕ್ಕಿನ ಕಾರ್ಖಾನೆ ಮುಂತಾದ ಅನೇಕ ಮಹತ್ವದ ಯೋಜನೆಗಳನ್ನು ಅವರು ದೇಶಕ್ಕೆ ನೀಡಿದ್ದಾರೆ.

ಮೈಸೂರು ರಾಜ್ಯದ ದಿವಾನರಾಗಿದ್ದ ಸಂದರ್ಭದಲ್ಲಿ ಅವರು ಹಲವು ಸುಧಾರಣೆಗಳನ್ನು ಜಾರಿಗೆ ತಂದರು. ಅವರ ಅಪಾರ ಸೇವೆಯನ್ನು ಮೆಚ್ಚಿ ಬ್ರಿಟಿಷರು ಅವರಿಗೆ “Sir” ಎಂಬ ಬಿರುದನ್ನು ನೀಡಿ ಗೌರವಿಸಿದರು. 1955ರಲ್ಲಿ ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿ ಸನ್ಮಾನಿಸಿತು. ಶತಮಾನಕ್ಕೂ ಮೀರಿದ ಆಯುಷ್ಯವನ್ನು ನಡೆಸಿದ ಅವರು 1962ರ ಏಪ್ರಿಲ್ 12 ರಂದು ನಿಧನರಾದರು.

ಇಂಜಿನಿಯರ್ಸ್ ಡೇ ಸಂದರ್ಭದಲ್ಲಿ, ನಾವು ವಿಶ್ವೇಶ್ವರಯ್ಯ ಅವರ ಜೀವನದಿಂದ ಸ್ಪೂರ್ತಿ ಪಡೆದು ಪರಿಶ್ರಮ, ಪ್ರಾಮಾಣಿಕತೆ ಹಾಗೂ ದೃಢ ನಿರ್ಧಾರದಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು.
ಇಂಜಿನಿಯರಿಂಗ್ – ಪರಿಶ್ರಮ ಮತ್ತು ಕ್ರಿಯಾಶೀಲತೆಯ ಪ್ರತೀಕ
ಪರಿಶ್ರಮ ಮತ್ತು ಕ್ರಿಯಾಶೀಲತೆಗೆ ಮತ್ತೊಂದು ಹೆಸರೇ ಇಂಜಿನಿಯರಿಂಗ್ ಎಂದು ಹೇಳಬಹುದು. ವಿಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸೃಜನಶೀಲ ಹಾಗೂ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಇಂಜಿನಿಯರಿಂಗ್ನ ವಿಶೇಷತೆ. ಸಮಾಜದ ಬದುಕನ್ನು ಸುಲಭಗೊಳಿಸಲು, ಅಭಿವೃದ್ಧಿಗೆ ದಾರಿಯೊಡ್ಡಲು ಇಂಜಿನಿಯರ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ದೇಶದ ಪ್ರಮುಖ ಯೋಜನೆಗಳಿಗೆ ಭದ್ರ ಬುನಾದಿ ಹಾಕುವುದರಿಂದ ಹಿಡಿದು, ಆರ್ಥಿಕ ಪ್ರಗತಿಯತ್ತ ದಾರಿ ತೋರಿಸುವವರೆಗೆ ಇಂಜಿನಿಯರ್ಗಳ ಪಾತ್ರ ಅವಿಭಾಜ್ಯ. ಅವರ ಕ್ರಿಯಾಶೀಲತೆ ಮತ್ತು ಬುದ್ಧಿವಂತಿಕೆ ಒಂದು ನಗರ, ಒಂದು ಸಂಸ್ಥೆ, ಒಂದು ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಮರ್ಥ್ಯ ಹೊಂದಿದೆ.

ಮಹಾನ್ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ತ್ಯಾಗ, ಪರಿಶ್ರಮ, ದೃಷ್ಟಿ ಇಂದಿಗೂ ಸ್ಫೂರ್ತಿದಾಯಕ. ಅವರಂತೆಯೇ ಇನ್ನೂ ಹಲವಾರು ಕೊಡುಗೆಗಳನ್ನು ನೀಡುವ ಇಂಜಿನಿಯರ್ಗಳು ಸಮಾಜದಲ್ಲಿ ಬೆಳೆದು ಬರಲಿ ಎಂಬುದು ಪ್ರತಿಯೊಬ್ಬರ ಆಶಯ.

ಪರಿಶ್ರಮ, ದೃಢನಿಶ್ಚಯ ಮತ್ತು ಪ್ರಾಮಾಣಿಕತೆಯಿಂದ ದೇಶದ ಅಭಿವೃದ್ಧಿಗೆ ದುಡಿಯುತ್ತಿರುವ ಎಲ್ಲಾ ಇಂಜಿನಿಯರ್ಗಳಿಗೂ ಇಂಜಿನಿಯರ್ಸ್ ದಿನದ ಹಾರ್ದಿಕ ಶುಭಾಶಯಗಳು.

































