ಉಡುಪಿ: ಸಿವಿಲ್ ಇಂಜಿನಿಯರ್ ಸಲಹೆಗಾರ ಮತ್ತು ವಾಸ್ತುಶಿಲ್ಪಿಗಳ ಸಂಘದ ವತಿಯಿಂದ ಇಂಜಿನಿಯರ್ ಗಳ ದಿನ ಸೆಪ್ಟೆಂಬರ್ 15 ರಂದು ಸಂಜೆ 7 ಗಂಟೆಗೆ ಕಡಿಯಾಳಿಯಲ್ಲಿರುವ ಮಾಂಡವಿ ಟ್ರೇಡ್ ಸೆಂಟರಿನ ಮೂರನೇ ಮಹಡಿಯಲ್ಲಿ ಆಚರಿಸಲಾಗುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಸಿ.ಸಿ.ಇ.ಎಯ ಅಧ್ಯಕ್ಷ ಪಾಂಡುರಂಗ ಆಚಾರ್ ವಹಿಸಲಿದ್ದು, ದ.ಕ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮಾಂಡವಿ ಬಿಲ್ಡರ್ಸ್ ಮತ್ತು ಡೆವೆಲಪರ್ಸ್ ನ ಎಂಡಿ ಡಾ.ಜೆರ್ರಿ ವಿನ್ಸೆಂಟ್ ಡೈಸ್ ಮತ್ತು ಸಂಘದ ಗೌರವಾಧ್ಯಕ್ಷ ಶ್ರೀನಾಥ್ ಹೆಗ್ಡೆ ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾ ರಂಗದ ಅಧ್ಯಕ್ಷ ಎಂ ಗಂಗಾಧರ್ ರಾವ್, ಸಿ.ಎಂ.ಸಿ ಯ ನಿವೃತ್ತ ಎಫ್ ಡಿ ಎ ಶ್ರೀಧರ್ ಕಾಣಂಗಿ , ಮಾಜಿ ನಗರಸಭಾ ಸದಸ್ಯ ನವೀನ್ ಭಂಡಾರಿ ಮತ್ತು ಸಮಾಜ ಸೇವಕ ರವಿ ಕಟಪಾಡಿ ಇವರನ್ನು ಸನ್ಮಾನಿಸಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.