“ನಿಮ್ಮ ಸೋನ್ ಪಾಪ್ಡಿ ಬಾಕ್ಸ್ ಯಾರಿಗೆ ಬೇಕು”?ಎಂದು ಮಾಲಿಕ ಕೊಟ್ಟ ಸ್ವೀಟ್ಸ್ ಬಾಕ್ಸ್ ನ್ನು ಗೇಟ್ ಮುಂದೆ  ಎಸೆದ ಉದ್ಯೋಗಿಗಳು!

ಚಂಡೀಗಢ: ದೀಪಾವಳಿ ಹಬ್ಬದ ಸಂದರ್ಭ ಕಂಪೆನಿಯ ಮಾಲಿಕರು ಸ್ವೀಟ್ಸ್ ನೀಡುವುದು ಮಾಮೂಲು, ಆದರೆ ಸ್ವೀಟ್ಸ್ ಜೊತೆ ಬೋಸನ್ ಅಥವಾ ಗಿಫ್ಟ್ ಅನ್ನು ಕೂಡ ನೀಡುವ ರೂಢಿ ಕಂಪೆನಿಗಳಿಗಿವೆ. ಬರೀ ಸ್ವೀಟ್ಸ್ ಮಾತ್ರ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಚಂಡೀಗಢದ ಕಂಪೆನಿಯ ಕೆಲಸಗಾರರು ಸಂಸ್ಥೆಯ ಗೇಟ್ ಮುಂದೆ ಎಸೆದು ಹೋದ ವಿಡಿಯೋವೊಂದು ವೈರಲ್ ಆಗುತ್ತಿದೆ.

ಹರ್ಯಾಣದ ಸೋನಿಪತ್ ನ ಗನ್ನೌರ್ ಕೈಗಾರಿಕಾ ಪ್ರದೇಶಲ್ಲಿನ ಕಾರ್ಖಾನೆಯೊಂದರ ಮಾಲೀಕ ನೀಡಿದ್ದ ದೀಪಾವಳಿ ಉಡುಗೊರೆಗೆ ಅವರದ್ದೇ ಸಿಬ್ಬಂದಿ ಕೆಂಡಾಮಂಡಲರಾಗಿದ್ದಾರೆ. ಮಾತ್ರವಲ್ಲದೇ ಸಂಸ್ಥೆಯ ಗೇಟ್ ಮುಂದೆ ಎಸೆದು ಹೋಗಿರುವ ವಿಡಿಯೋ ವೈರಲ್ ಆಗಿದೆ.

ಸೋನಿಪತ್‌ನ ಗನ್ನೌರ್‌ನಲ್ಲಿರುವ ಖಾಸಗಿ ಕಾರ್ಖಾನೆಯ ಮಾಲೀಕ ತನ್ನ ಉದ್ಯೋಗಿಗಳಿಗೆ ಸೋನ್‌ಪಾಪ್ಡಿ ಬಾಕ್ಸ್ ಗಳನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಮಾಲೀಕನ ಸ್ವೀಟ್ಸ್ ಉಡುಗೊರೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಂಸ್ಥೆಯ ಸಿಬ್ಬಂದಿ ಅವುಗಳನ್ನು ಕಾರ್ಖಾನೆಯ ಗೇಟ್ ಮುಂದೆ ಎಸೆದು ಹೋಗಿದ್ದಾರೆ ದೇಶದ ವಿವಿಧ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ವಿವಿಧ ವಸ್ತುಗಳನ್ನು ನೀಡುತ್ತಿದ್ದರೆ, ತಮ್ಮ ಮಾಲೀಕ ಮಾತ್ರ ಕೇವಲ 50 ರೂ ಬೆಲೆಯ ಸೋನ್ ಪಾಪ್ಡಿ ಸಿಹಿ ತಿನಿಸನ್ನು ನೀಡಿರುವುದು ಉದ್ಯೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಸ್ವೀಟ್ಸ್ ಜೊತೆಗೆ ಬೇರೆ ಏನಾದರೂ ನೀಡಬೇಕಿತ್ತು ಎಂದುಉದ್ಯೋಗಿಗಳು ಹೇಳಿಕೊಂಡಿದ್ದಾರೆ.