ಇಬ್ಬರು ವ್ಯಾಪಾರ ದಿಗ್ಗಜರು, ತಮ್ಮ ನೇರ ನಡೆ ನುಡಿಗಳಿಗೆ ಹೆಸರುವಾಸಿಯಾದವರು, ಒಂದೆಡೆ ಸೇರಿದರೆ ಅದು ಹೇಗಿರುತ್ತೋ? ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿರುವ ಟೆಸ್ಲಾ ಕಂಪನಿಯ ಮಾಲಕ ಏಲನ್ ಮಸ್ಕ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ಟ್ವಿಟರ್ ನಿಷೇಧವನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಟ್ವಿಟ್ಟರ್ ತನ್ನನ್ನು ಬ್ಯಾನ್ ಮಾಡಿದ್ದಕ್ಕಾಗಿ ಆ ಸಂಸ್ಥೆಯನ್ನೇ ಖರೀದಿ ಮಾಡಿರುವ ಮಸ್ಕ್, ಇದೀಗ ಟ್ರಂಪ್ ಮೇಲಿರುವ ಟ್ವಿಟರ್ ಬ್ಯಾನ್ ಅನ್ನು ತೆರವುಗೊಳಿಸಲು ಉತ್ಸುಕರಾಗಿದ್ದಾರೆ. ನಿರಂಕುಶ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಕೊಡುವ ಮಸ್ಕ್, ಒಂದು ಆಟೋ ಕಾನ್ಫರೆನ್ಸ್ನಲ್ಲಿ ಮಾತನಾಡುತ್ತಾ, ಟ್ರಂಪ್ ಮೇಲಿನ ನಿಷೇಧವು ‘ನೈತಿಕವಾಗಿ ತಪ್ಪು ಮತ್ತು ಮೂರ್ಖತನ’ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ $44 ಬಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡಿರುವ ಮಸ್ಕ್, ತನ್ನ ಟೀಕಾಕಾರರನ್ನು ಟ್ವಿಟರ್ ನಿಂದ ಕಿತ್ತೊಗೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಟ್ರಂಪ್ ಮೇಲಿನ ನಿಷೇಧ ತೆರವುಗೊಳಿಸಿರುವುದನ್ನು ಟ್ವಿಟರ್ ನ ಸಹ ಸಂಸ್ಥಾಪಕ ಮತ್ತು ಮಾಜಿ ಸಿಇಒ ಜ್ಯಾಕ್ ಡೋರ್ಸಿ ಸ್ವಾಗತಿಸಿದ್ದಾರೆ.
BREAKING: @ElonMusk says he would reverse Trump's suspension from Twitter and called the ban "morally wrong" and "flat out stupid." pic.twitter.com/ahRTaO5caV
— Benny Johnson (@bennyjohnson) May 10, 2022












