ಬಾಹ್ಯಾಕಾಶದ ಬಿಗ್ ಬಾಸ್ ಏಲಾನ್ ಮಸ್ಕ್ ಗೆ ಭಾರತದಲ್ಲೊಬ್ಬ ಕುಚ್ಚಿಕೂ ಗೆಳೆಯ! ಪೂನಾದ ಸಾಪ್ಟವೇರ್ ಇಂಜಿನಿಯರ್ ಪ್ರಣಯ್-ಮಸ್ಕ್ ದೋಸ್ತಿ!

ಬಾಹ್ಯಾಕಾಶ ತಂತ್ರಜ್ಞಾನದ ಬಿಗ್ ಬಾಸ್, ಟೆಸ್ಲಾ ಕಂಪನಿ ಮಾಲಕ, ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಏಲಾನ್ ಮಸ್ಕ್ ಬಗ್ಗೆ ತಿಳಿಯದೆ ಇರುವವರು ಕಡಿಮೆ. ಮಂಗಳ ಗ್ರಹದ ಮೇಲೆ ಮನೆಯ ಮಾಡಲು ಸ್ಪೇಸ್ ಎಕ್ಸ್‌ಪ್ಲೋರೇಶನ್ ಟೆಕ್ನಾಲಜೀಸ್ ಕಾರ್ಪೊರೇಷನ್ ಎನ್ನುವ ಅಮೆರಿಕದ ಬಾಹ್ಯಾಕಾಶ ನೌಕೆ ತಯಾರಕ, ಬಾಹ್ಯಾಕಾಶ ಉಡಾವಣಾ ಪೂರೈಕೆದಾರ ಕಂಪನಿಯನ್ನು ಹುಟ್ಟುಹಾಕಿರುವ ಮಸ್ಕ್, ಸೌರಶಕ್ತಿ ಆಧಾರಿತ ಉತ್ಪನ್ನ ಮತ್ತು ಸೇವೆಗಳನ್ನು ನೀಡುವ ಟೆಸ್ಲಾ ಕಂಪನಿಯ ಸ್ಥಾಪಕ ಕೂಡಾ ಹೌದು.

ಇಂತಹ ದಿಗ್ಗಜನಿಗೆ ಭಾರತದಲ್ಲಿ ಒಬ್ಬ ಗೆಳೆಯನಿದ್ದಾನೆ. ಪೂನಾದಲ್ಲಿ ವಾಸವಾಗಿರುವ ಸಾಫ್ಟವೇರ್ ಇಂಜಿನಿಯರ್ ಪ್ರಣಯ್ ಪಥೋಲೆ ಏಲಾನ್ ಮಸ್ಕ್ ಅವರ ಕಟ್ಟಾ ಅಭಿಮಾನಿ. ಇವರಿಬ್ಬರ ಗೆಳೆತನ ಶುರುವಾಗಿದ್ದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ. ಜನವರಿ 2018 ರಲ್ಲಿ, ಪ್ರಣಯ್ ಭಾರತದ ಪುಣೆಯಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಓದುತ್ತಿದ್ದಾಗ, ಟೆಸ್ಲಾ ಕಾರಿನ ಮಾದರಿಯಲ್ಲಿ ಕಂಡು ಬಂದಿದ್ದ ಒಂದು ದೋಷದ ಬಗ್ಗೆ ಟ್ವೀಟಿಸಿ ಅದನ್ನು ಸರಿಪಡಿಸುವಂತೆ ಕೇಳಿಕೊಂಡಿದ್ದರು. ಆ ಸಮಯದಲ್ಲಿ ಪ್ರಣಯ್ ಟ್ವೀಟ್‌ಗೆ ಮಸ್ಕ್ ಸಕಾರಾತ್ಮಕವಾಗಿ ಉತ್ತರಿಸಿದ್ದರು ಮತ್ತು ಅಲ್ಲಿಂದ ಮುಂದೆ ಇವರಿಬ್ಬರ ಗೆಳೆತನ ಬೆಳೆಯುತ್ತಾ ಹೋಗಿದೆ.

https://twitter.com/PPathole/status/1561591196178419712?ref_src=twsrc%5Etfw%7Ctwcamp%5Etweetembed%7Ctwterm%5E1561591196178419712%7Ctwgr%5E691b1920e2e4c8b544b0cd9864e5b56998d7307a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felon-musk-finally-meets-his-online-friend-from-india-in-texas-desi-twitter-reacts-1991241-2022-08-22

ಇದೀಗ ಈ ಗೆಳೆತನದ ಮುಂದುವರಿದ ಹೆಜ್ಜೆಯಾಗಿ ಪ್ರಣಯ್ ಟೆಕ್ಸಾಸ್ ನಲ್ಲಿರುವ ಗಿಗಾಫ್ಯಕ್ಟರಿಯಲ್ಲಿ ಏಲಾನ್ ಮಸ್ಕ್ ಅವರನ್ನು ಭೇತಿಯಾಗಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಫೋಟೋ ಹಂಚಿಕೊಂಡು “ಗಿಗಾಫ್ಯಾಕ್ಟರಿ ಟೆಕ್ಸಾಸ್‌ನಲ್ಲಿ ಏಲಾನ್ ಮಸ್ಕ್ ನಿಮ್ಮನ್ನು ಭೇಟಿ ಮಾಡಿದ್ದು ತುಂಬಾ ಚೆನ್ನಾಗಿತ್ತು. ಅಂತಹ ವಿನಮ್ರ ಮತ್ತು ವಿನೀತ ವ್ಯಕ್ತಿಯನ್ನು ನೋಡಿಲ್ಲ. ನೀವು ಲಕ್ಷಾಂತರ ಜನರಿಗೆ ಸ್ಫೂರ್ತಿ” ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಪ್ರಣಯ್ ನ ಈ ಫೋಟೋ ಕಂಡು ಭಾರತೀಯ ನೆಟ್ಟಿಗರು ಕುಣಿದಾಡಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ತನ್ನ ಟಿಟ್ವರ್ ಗೆಳಯನ್ನು ಭೇಟಿಯಾಗಲು ಸಮಯ ನೀಡಿದ ಏಲಾನ್ ಮಸ್ಕ್ ಅವರ ವಿನಿಮ್ರತೆಯ ಬಗೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.