ಇಸ್ರೇಲ್ ನಲ್ಲಿ ಎಲ್ಲ ಸೂಪರ್ ಚಾರ್ಜಿಂಗ್ ಸ್ಟೇಷನ್ ಗಳು ಉಚಿತ ಬಳಕೆಗೆ ಲಭ್ಯ ಎಂದ ಟೆಸ್ಲಾ ದಿಗ್ಗಜ

ಕ್ಯಾಲಿಫೋರ್ನಿಯಾ: ಟೆಸ್ಲಾ ಮಾಲೀಕ ಏಲಾನ್ ಮಸ್ಕ್, ಇಸ್ರೇಲ್‌ನಲ್ಲಿ ಬಳಕೆದಾರರು ತಮ್ಮ ವಾಹನಗಳನ್ನು ಉಚಿತವಾಗಿ ಚಾರ್ಜ್ ಮಾಡಬಹುದು ಎಂದು X ನಲ್ಲಿ ತಿಳಿಸಿದ್ದಾರೆ. ಇಸ್ರೇಲ್-ಹಮಾಸ್ ಯುದ್ದದ ಉದ್ವಿಗ್ನತೆಯ ನಡುವೆ ಪ್ರಯಾಣವನ್ನು ಸುಲಭಗೊಳಿಸಲು ಯು.ಎಸ್ ವಾಹನ ತಯಾರಕ ಎಲ್ಲಾ ಸೂಪರ್ಚಾರ್ಜರ್‌ ಸ್ಟೇಷನ್ ಗಳನ್ನು ಬಳಕೆದಾರರಿಗೆ ಮುಕ್ತವಾಗಿಸಿದ್ದಾರೆ.

ಟೆಸ್ಲಾ ಇಸ್ರೇಲ್‌ನಲ್ಲಿ 22 ಸೂಪರ್‌ಚಾರ್ಜರ್ ಸ್ಟೇಷನ್‌ಗಳನ್ನು ಹೊಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಸೂಪರ್‌ಚಾರ್ಜರ್‌ಗಳು ಟೆಸ್ಲಾದ ಅತ್ಯಂತ ವೇಗದ ಚಾರ್ಜಿಂಗ್ ಸ್ಟೇಷನ್‌ಗಳಾಗಿದ್ದು ಅದು 250 kW ವರೆಗೆ ಶಕ್ತಿಯನ್ನು ಒದಗಿಸುತ್ತದೆ. ಟೆಸ್ಲಾದ ಎಲೆಕ್ಟ್ರಿಕ್ ವಾಹನಗಳು ಸೂಪರ್‌ಚಾರ್ಜರ್‌ಗೆ ಸಂಪರ್ಕಗೊಂಡಾಗ ಕೇವಲ 15 ನಿಮಿಷಗಳಲ್ಲಿ 200 ಮೈಲುಗಳ ವ್ಯಾಪ್ತಿಯವರೆಗೆ ಓಡಬಹುದು.

ಇಸ್ರೇಲ್ ತನ್ನ ದಕ್ಷಿಣ ಮತ್ತು ಉತ್ತರ ಭಾಗಗಳಿಂದ ಭಯೋತ್ಪಾದಕ ದಾಳಿಗಳನ್ನು ಎದುರಿಸುತ್ತಿರು ಸಂದರ್ಭದಲ್ಲಿ ಈ ಘೋಷಣೆ ಬಂದಿದೆ.

ಗಾಜಾದಲ್ಲಿರುವ ಶಾಂತಿಯನ್ನು ಬಯಸುವ ನಾಗರಿಕರಿಗೂ ತಾನು ಸಹಾಯ ಮಾಡಲು ಬಯಸಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಅದು ಸಾಧ್ಯವಿಲ್ಲ ಎಂದು X ಬಳಕೆದಾರರೊಬ್ಬರ ಪ್ರಶ್ನೆಗೆ ಉತ್ತರಿಸಿ ಹೇಳಿದ್ದಾರೆ.