ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಯೋಗೀಶ್ ನಯನ್ ಇನ್ನಾ ಗೆಲುವು

ಕಾರ್ಕಳ: ಜನವರಿ 12ರಂದು ನಡೆದ ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯೋಗೀಶ್ ನಯನ್ ಇನ್ನಾ ಅವರು 344 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಸುಹಾಸ್ ಸಂತೋಷ್ ಕಾವ 320 ಪಡೆದು ತೀವ್ರ ಸ್ಪರ್ಧೆಯೊಡ್ಡಿದ್ದರು.‌

ಅಧ್ಯಕ್ಷ ಸ್ಥಾನಕ್ಕೆ ಯೋಗೀಶ್ ನಯನ್ ಇನ್ನಾ, ಸುಹಾಸ್ ಕಾವ, ಪ್ರದೀಪ್ ಬೇಲಾಡಿ ಸ್ಪರ್ಧಿಸಿದ್ದರು. ಯೋಗೀಶ್ ಇನ್ನಾ 24 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.