ಜೀವಕ್ಕಿಂತ ಚುನಾವಣೆ ಮುಖ್ಯವೇ?: ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಏನು ಹೇಳುತ್ತಾರೆ?

ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಪ್ರಧಾನವಾದ ಮಹತ್ವವೂ ಇದೆ. ಆದರೆ ಅದಕ್ಕೂ ಸಮಯ ಸಂದರ್ಭ ಅನ್ನುವುದು ಇಲ್ಲವೇ ಎಂಬ ಪ್ರಶ್ನೆ ಇಂದಿನ ಕೊರೊನಾ ವಿಷಮಸ್ಥಿತಿಯಲ್ಲಿ ಸಹಜವಾಗಿ ಮೂಡುವ ಪ್ರಶ್ನೆ .

ಕನಾ೯ಟಕದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಾದ ಆರ್.ಆರ್.ನಗರ ಮತ್ತು ಶಿರಾ ಹಾಗೂ ಕೆಲವೂ ವಿಧಾನ ಪರಿಷತ್ ಗಳಿಗೆ ನಡೆಸುತ್ತಿರುವ ಚುನಾವಣೆ, ಅದೇ ರೀತಿಯಲ್ಲಿ ಗ್ರಾಮ ಪಂಚಾಯತ್ ಗಳಿಗೆ 2020 ಡಿಸೆಂಬರ್ ತಿಂಗಳೊಳಗೆ ಚುನಾವಣೆ ನಡೆಸಲು ಸಿದ್ಧತೆ ನಡೆಯುತ್ತಿವೆ.

ಜನರ ಬದುಕೇ ಕೊರೊನಾದಿಂದ ತತ್ತರಿಸಿ ಹೇೂಗಿದೆ. ಜೀವವನ್ನು ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ಎದುರಾಗಿದೆ. ಇಂತಹ ಅನಾರೋಗ್ಯ ಪರಿಸ್ಥಿತಿಯಲ್ಲಿ ಮತದಾರರು ಮತ ಕಟ್ಟೆಗೆ ಹೇೂಗಿ ಮತ ಚಲಾಯಿಸುವ ಸಂದರ್ಭದಲ್ಲಿ ಕೊರೊನಾಕ್ಕೆ ತುತ್ತಾದರೆ, ಇದಕ್ಕೆಲ್ಲ ಜವಾಬ್ದಾರಿ ಹೊರುವವರು ಸರಕಾರವೇ ರಾಜ್ಯ ಚುನಾವಣಾ ಆಯೇೂಗವೇ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಬರುತ್ತದೆ.

ಇಷ್ಟೆಲ್ಲಾ ಜೀವಕ್ಕೆ ತೊಂದರೆ ತೆಗೆದುಕೊಂಡು ಚುನಾವಣೆ ನಡೆಸುವ ಅಗತ್ಯವಾದರೂ ಏನಿದೆ?
ಈ ಕೊರೊನಾದಿಂದಾಗಿ ಆಥಿ೯ಕ ಸ್ಥಿತಿಯೇ ನಲುಗಿ ಹೇೂಗಿದೆ. ಶಾಲಾ ಕಾಲೇಜುಗಳು ಬಾಗಿಲು ಮುಚ್ಚಿ ಎಂಟು ತಿಂಗಳುಗಳೇ ಕಳೆದು ಹೇೂಗಿದೆ. ಅಗತ್ಯ ಹುದ್ದೆಗಳು ಇನ್ನೂ ಖಾಲಿ ಖಾಲಿಯಾಗಿವೆ. ಸರಕಾರಿ ನೌಕರರಿಗೆ ಸಂಬಳ ಕೊಡುವುದೇ ಕಷ್ಟ ಎಂಬ ಪರಿಸ್ಥಿತಿ. ಇಷ್ಟೆಲ್ಲಾ ವಿಷಮಸ್ಥಿತಿಯಲ್ಲಿ ಕನಾ೯ಟಕದಲ್ಲಿ ಚುನಾವಣೆ ನಡೆಸುವ ಅಗತ್ಯವಾದರೂ ಏನು?.

ಈಗ ನಡೆಯುವ ಉಪ ಚುನಾವಣೆ ಸರಕಾರದ ಸ್ಥಿರತೆಗಾಗಲಿ ಅಸ್ಥಿರತೆಗಾಗಲಿ ಯಾವುದೇ ಪರಿಣಾಮವೂ ಬೀರುವುದಿಲ್ಲ. ಅನ್ನುವಾಗ ಈ ತರಾತುರಿಯಲ್ಲಿ ಚುನಾವಣೆ ನಡೆಸುವ ಅಗತ್ಯ ಖಂಡಿತವಾಗಿಯೂ ಇಲ್ಲ .

ನಮ್ಮ ರಾಜಕಾರಣಿಗಳಿಗೆ ಚುನಾವಣೆ ನಡೆಯದ್ದಿದರೆ ಉಸಿರಾಡುವುದೇ ಕಷ್ಟ ಅನ್ನುವ ತರದಲ್ಲಿ ನಮ್ಮ ಪ್ರಜಾಪ್ರಭುತ್ವ ನಡೆಸುತ್ತಿರುವುದು ಅತ್ಯಂತ ಖೇದಕರ. ಅವರ ಸಂಬಳ ಸಾರಿಗೆ ಸವಲತ್ತುಗಳಿಗೆ ಯಾವುದೇ ಕೊರತೆ ಬಾರದ ಹಾಗೆ ಪಕ್ಷ ಭೇದ ಮರೆತು ವತಿ೯ಸುತ್ತಿದ್ದಾರೆ ಅನ್ನುವುದು ಜನರ ಅಸಹಾಯಕತೆಗೆ ಹಿಡಿದ ಕೈಗನ್ನಡಿ.

ಸ್ವಾಯತ್ತತೆಯ ಚುನಾವಣಾ ಆಯೇೂಗವಾದರೂ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡ ಬಹುದಿತ್ತು. ಅದನ್ನೂ ಮಾಡಲಿಲ್ಲ. ಕೊನೆಗೂ ನಮ್ಮೆಲ್ಲರ ಹಕ್ಕು ಜೀವಕ್ಕೆ ರಕ್ಷಣೆ ಕೊಡಬೇಕಾದ ನ್ಯಾಯಾಲಯದಲ್ಲಿ ಯಾರು ಪ್ರಶ್ನೆ ಮಾಡಿದ ಹಾಗೆ ಕಾಣುವುದಿಲ್ಲ. ಕೆಲವರಿಗ್ಗಂತೂ ಚುನಾವಣೆ ನಡೆದರೆ ಮಾತ್ರ ಅವರ ಬದುಕು ‍ಸಂಪನ್ನಗೊಳ್ಳುವುದು. ಹಾಗಾಗಿ ಅವರೂ ಮೌನವಾಗಿ ಬಿಟ್ಟಿದ್ದಾರೆ. ಪ್ರಬುದ್ಧ ಮತದಾರ ಮೌನಕ್ಕೆ ಶರಣಾಗಿ ಬಿಟ್ಟಿದ್ದಾನೆ.

ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ.