ಒಬ್ಬಂಟಿತನದಿಂದ ಮನನೊಂದು ವೃದ್ಧ ಆತ್ಮಹತ್ಯೆ

ಮಿಯಾರು: ಮಾನಸಿಕ ಕಾಯಿಲೆ ಹಾಗೂ ಒಬ್ಬಂಟಿತನದಿಂದ ಮನನೊಂದು ವೃದ್ಧರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಅರ್ಪದೆ ಎಂಬಲ್ಲಿ ಮೇ.8 ರಂದು ಸಂಜೆ ನಡೆದಿದೆ.

ಮಿಯಾರು ಗ್ರಾಮದ ಅರ್ಪದೆ ನಿವಾಸಿ 77 ವರ್ಷದ ಜೇಮ್ಸ್ ಗೋರಿಯಸ್‌ ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಜೇಮ್ಸ್ ಅವರು ಒಬ್ಬರೇ ವಾಸವಾಗಿದ್ದು, ಹೆಂಡತಿ ಮತ್ತು ಮಗಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಒಬ್ಬಂಟಿತನದಿಂದ ಮನನೊಂದ ಜೇಮ್ಸ್ ಅವರು, ಮೇ.8 ರಂದು ಸಂಜೆ ಮನೆಯ ಹಿಂದುಗಡೆ ಇರುವ ಶೆಡ್ಡಿಗೆ ಅಳವಡಿಸಿದ ಕಬ್ಬಿಣದ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.