ಭಾರತದಲ್ಲಿ ಚಂದ್ರದರ್ಶನ: ಪವಿತ್ರ ಈದುಲ್ ಫಿತ್ರ್‌ ಹಬ್ಬದ ಆಚರಣೆಗಳು ಪ್ರಾರಂಭ

ನವದೆಹಲಿ: ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಸಿಂಗಾಪುರ, ಬಾಂಗ್ಲಾದೇಶ ಮತ್ತು ಇತರ ದಕ್ಷಿಣ ಏಷ್ಯಾದ ದೇಶಗಳ ಮುಸ್ಲಿಮರು ರಂಜಾನ್ ಅಂತ್ಯವನ್ನು ಗುರುತಿಸುವ ರಂಜಾನ್ 29, 1445 ಹಿಜ್ರಿಗೆ ಅನುಗುಣವಾಗಿ ಮಂಗಳವಾರ, ಏಪ್ರಿಲ್ 09, 2024 ರ ಸಂಜೆ ಹೊಸ ಚಂದ್ರನನ್ನು ವೀಕ್ಷಿಸಲು ಸಜ್ಜಾದರು. ವಿಶ್ವದಾದ್ಯಂತ ಚಂದ್ರದರ್ಶನಕ್ಕನುಗುಣವಾಗಿ ಮುಸಲ್ಮಾನರ ಪವಿತ್ರ ಹಬ್ಬವಾದ ಈದುಲ್ ಫಿತ್ರ್‌ ಅನ್ನು ಆಚರಿಸಲಾಗುತ್ತಿದೆ.

ನಿನ್ನೆ ರಾತ್ರಿ ಕೇರಳದ ಪೂನ್ನಾಣಿಯಲ್ಲಿ ಚಂದ್ರನ ದರ್ಶನವಾದದ್ದರಿಂದ ಇಂದು ಕೇರಳ ರಾಜ್ಯ ಸೇರಿ ಕರಾವಳಿ ಭಾಗದ ಮಂಗಳೂರು, ಕೊಡಗಿನಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಮುಸಲ್ಮಾನರು 29 ದಿನ ಉಪವಾಸ ನೆರವೇರಿಸಿ ಇಂದು ಉಪವಾಸ ಮುರಿಯಲಾಗುತ್ತದೆ. ಚಂದದರ್ಶನ ಒಂದು ದಿನ ತಡವಾದದ್ದರಿಂದ ಸೌದಿಯಲ್ಲಿ ಈ ಬಾರಿ 30 ದಿನ ಉಪವಾಸ ಆಚರಿಸಲಾಗಿದೆ.

ಪವಿತ್ರವಾದ ರಂಜಾನ್ ಉಪವಾಸ 29 ದಿನ ಪೂರ್ಣಗೊಳಿಸಿ ಕರಾವಳಿಯಾದ್ಯಂತ ಮುಸಲ್ಮಾನರು ಇಂದು ಈದುಲ್ ಫಿತರ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಕೇರಳ,ತಮಿಳು ನಾಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯೇ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮುಸಲ್ಮಾನರು ನೆರವೇರಿಸುತ್ತಿದ್ದಾರೆ.

ಈದ್-ಉಲ್-ಫಿತರ್ ಅನ್ನು ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್‌ನ ಹತ್ತನೇ ತಿಂಗಳಾದ ಶವ್ವಾಲ್‌ನ ಮೊದಲ ದಿನದಂದು ಅಮಾವಾಸ್ಯೆ ಅಥವಾ ಅರ್ಧಚಂದ್ರಾಕೃತಿಯ ದರ್ಶನದ ನಂತರ ಆಚರಿಸಲಾಗುತ್ತದೆ. ಇದು ಪ್ರಮುಖ ಇಸ್ಲಾಮಿಕ್ ಹಬ್ಬವಾಗಿದ್ದು,

“ಈದ್” ಎಂದರೆ “ಆಚರಣೆ” ಮತ್ತು “ಫಿತರ್” ಎಂದರೆ “ಉಪವಾಸ ಮುರಿಯುವುದು” ಮತ್ತು ಇದನ್ನು ವಿಶ್ವದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ ಆದರೆ ಇಸ್ಲಾಂ ಧರ್ಮವು ಚಂದ್ರನ ಕ್ಯಾಲೆಂಡರ್ ಅನ್ನು ಅನುಸರಿಸುವುದರಿಂದ ಚಂದ್ರದರ್ಶನಕ್ಕನುಗುಣವಾಗಿ ಹಬ್ಬದ ನಿಖರವಾದ ದಿನಾಂಕವು ಪ್ರತಿ ವರ್ಷ ಬದಲಾಗುತ್ತದೆ.