ತುಲಾ ರಾಶಿ
ತುಲಾ ರಾಶಿಯಲ್ಲಿ ಜನಿಸಿದವರಿಗೆ ಸೂರ್ಯನು ಹನ್ನೊಂದನೇ ಮನೆಯ ಅಧಿಪತಿ. ಸೂರ್ಯನು ಕರ್ಕ ರಾಶಿಯ ಮೂಲಕ ಚಲಿಸುವಾಗ ಮತ್ತು ಹತ್ತನೇ ಮನೆಗೆ ಪ್ರವೇಶಿಸಿದಾಗ, ಅದು ಅವರ ವೃತ್ತಿಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಇವರು ತಮ್ಮ ಕೆಲಸದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ, ಹಾಗೂ ಸಹೋದ್ಯೋಗಿಗಳಿಂದ ಮನ್ನಣೆ ಮತ್ತು ಪ್ರಶಂಸೆಯನ್ನು ಗಳಿಸುತ್ತಾರೆ. ಇದು ಬಡ್ತಿ ಮತ್ತು ಸಂಬಳ ಹೆಚ್ಚಳದ ಅವಕಾಶಗಳಿಗೆ ಕಾರಣವಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಸಿಕೊಂಡವರಿಗೆ ಧನಾತ್ಮಕ ಫಲಿತಾಂಶಗಳು ಕಂಡು ಬಂದು ಉದ್ದಿಮೆಯಲ್ಲಿ ಯಶಸ್ಸು ದೊರಕಲಿದೆ.
ವೈಯಕ್ತಿಕ ಜೀವನದಲ್ಲಿ ಇವರು ತಮ್ಮ ತಂದೆಯೊಂದಿಗಿನ ಸಂಬಂಧದಲ್ಲಿ ಸುಧಾರಣೆಯನ್ನು ಕಾಣುತ್ತಾರೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಮತ್ತು ಇವರು ಕುಟುಂಬಕ್ಕೆ ಹೆಮ್ಮೆ ತರಬಹುದು. ಬಿಡುವಿಲ್ಲದ ಕೆಲಸದ ವೇಳಾಪಟ್ಟಿಯಿಂದಾಗಿ, ತುಲಾ ರಾಶಿಯವರು ಕುಟುಂಬದ ಜವಾಬ್ದಾರಿಗಳಿಂದ ಬೇರ್ಪಟ್ಟಂತೆ ಕಾಣಿಸಬಹುದು. ಹೊಸ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ. ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಜವಾಬ್ದಾರಿಗಳಿಗೆ ಆದ್ಯತೆ ನೀಡುವುದು ಮುಖ್ಯವಾಗಿದೆ.
ಪರಿಹಾರ: ತುಲಾ ರಾಶಿಯವರು ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡಬೇಕು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ, ಸೂರ್ಯನು ಅವರ ಹತ್ತನೇ ಮನೆಯ ಅಧಿಪತಿಯಾಗಿದ್ದು, ಅವರ ಒಂಬತ್ತನೇ ಮನೆಯ ಮೂಲಕ ಸಾಗುತ್ತಾನೆ. ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಚಾರವು ಸಾಮಾಜಿಕ ಸ್ಥಾನಮಾನ ಮತ್ತು ಸಮಾಜದಲ್ಲಿ ಮನ್ನಣೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ ಮತ್ತು ಇವರು ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಹೊಸ ಜನರ ಜೊತೆ ಬೆರೆಯುವ ಅವಕಾಶದಿಂದ ಖ್ಯಾತಿ ಗಳಿಸುವ ಸಾಧ್ಯತೆ. ತಂದೆಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಜಾಗರೂಕತೆ ವಹಿಸುವುದು ಮುಖ್ಯ.
ಇಲಾಖೆಯೊಳಗೆ ಉದ್ಯೋಗ ವರ್ಗಾವಣೆ ಮತ್ತು ಹಠಾತ್ ಬದಲಾವಣೆಗಳ ಸಾಧ್ಯತೆಯೊಂದಿಗೆ ಈ ಅವಧಿಯು ಮಧ್ಯಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೆಲಸ ಬದಲಾವಣೆಗೆ ಸಕಾಲ. ವ್ಯಾಪಾರ ವಲಯದಲ್ಲಿ, ವಿಶೇಷವಾಗಿ ರಿಯಲ್ ಎಸ್ಟೇಟ್, ಪ್ರಯಾಣ ಉದ್ಯಮ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ. ಈ ಅವಧಿಯಲ್ಲಿ ಕೆಲವು ಕೌಟುಂಬಿಕ ಉದ್ವಿಗ್ನತೆ ಇರಬಹುದು, ಆದರೆ ಸಂಬಂಧಿಕರೊಂದಿಗೆ ವಿಶೇಷವಾಗಿ ಜೀವನ ಸಂಗಾತಿಯೊಂದಿಗೆ ತೀರ್ಥಯಾತ್ರೆಗೆ ಹೋಗುವುದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಹೆಚ್ಚುವರಿಯಾಗಿ, ಈಅವಧಿಯಲ್ಲಿ ಆರೋಗ್ಯ ಸುಧಾರಿಸುವ ನಿರೀಕ್ಷೆಯಿದೆ. ಧನಾತ್ಮಕವಾಗಿರಲು, ಕೈಯಲ್ಲಿರುವ ಅವಕಾಶಗಳ ಮೇಲೆ ಕೇಂದ್ರೀಕರಿಸಲು ಮತ್ತು ಸಂಬಂಧಗಳು ಮತ್ತು ಕೌಟುಂಬಿಕ ಜೀವನದ ಬಗ್ಗೆ ಎಚ್ಚರದಿಂದಿರಲು ಸಲಹೆ ನೀಡಲಾಗುತ್ತದೆ.
ಪರಿಹಾರ: ವೃಶ್ಚಿಕ ರಾಶಿಯವರು ಭಾನುವಾರ ಹಸುಗಳಿಗೆ ಗೋಧಿ ಹಿಟ್ಟಿನಿಂದ ಮಾಡಿದ ಪದಾರ್ಥವನ್ನು ತಿನ್ನಿಸಬೇಕು.
ವಿ.ಸೂ: ಈ ಲೇಖನ ಕೇವಲ ಮಾಹಿತಿಗಾಗಿ ಮಾತ್ರ. ಹೆಚ್ಚಿನ ಸ್ಪಷ್ಟತೆಗಾಗಿ ತಜ್ಞರನ್ನು ಸಂಪರ್ಕಿಸಿ
ಮಾಹಿತಿ: ಆಸ್ಟ್ರೋ ಸೇಜ್