ಗುರು ಸಂಕ್ರಮಣ-2023: ಮಕರ-ಕುಂಭ ಹಾಗೂ ಮೀನ ರಾಶಿಯವರ ಗೋಚರ ಫಲಗಳು

ಮಕರ ರಾಶಿ

ಮಕರ ರಾಶಿಯವರಿಗೆ ಗುರುವು ಮೂರನೇ ಮನೆ ಮತ್ತು ಹನ್ನೆರಡನೆಯ ಮನೆಯ ಅಧಿಪತಿ. ಈ ಸಂಚಾರದ ಸಮಯದಲ್ಲಿ, ಗುರುವು ನಾಲ್ಕನೇ ಮನೆಯಲ್ಲಿ ಸಾಗುತ್ತಾನೆ. ನಾಲ್ಕನೇ ಮನೆಯಲ್ಲಿ ಗುರು ಹೋಗುವುದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲವಾದರೂ ಇದು ಸ್ವಲ್ಪಮಟ್ಟಿಗೆ ಪ್ರಯೋಜನಕಾರಿಯಾಗಿದೆ. ಗುರು ತನ್ನದೇ ಆದ ರಾಶಿಯಲ್ಲಿ ಸಾಗುತ್ತಿದೆ. ಸೂರ್ಯ ಮತ್ತು ರಾಹು ಜೊತೆಗಿನ ಮೈತ್ರಿಯು ಗುರುವಿನ ಸಂಚಾರದ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇವರು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು; ಎದೆ ನೋವು ಮತ್ತು ಎದೆಯ ಸೆಳೆತದಂತಹ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಯಾವುದೇ ಪ್ರಮುಖ ಸಮಸ್ಯೆಯಿಂದ ಬಳಲುತ್ತಿರುವವರು ಈ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆರೋಗ್ಯ ಕ್ಷೀಣಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಆರೋಗ್ಯವನ್ನು ನಿರ್ಲಕ್ಷಿಸಿದರೆ ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಕುಟುಂಬ ಜೀವನದಲ್ಲಿ ವ್ಯತ್ಯಾಸಗಳಾಗಬಹುದು. ಸಂಪೂರ್ಣ ಏಕಾಗ್ರತೆಯು ಕುಟುಂಬದ ಮೇಲೆ ಇದ್ದರೂ, ವೃತ್ತಿಜೀವನದ ಬಗ್ಗೆಯೂ ಮನಸ್ಸನ್ನು ಕೇಂದ್ರೀಕರಿಸಬೇಕು. ಉದ್ಯೋಗದಲ್ಲಿರುವ ವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯುತ್ತಾರೆ. ತಾಯಿಯೊಂದಿಗಿನ ಸಂಬಂಧಗಳು ಉತ್ತಮಗೊಳ್ಳುತ್ತವೆ, ಆದರೆ ಗುರುವಿನ ಸಂಕ್ರಮಣ 2023 ರ ಆರಂಭದಲ್ಲಿ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಅವರನ್ನು ತೊಂದರೆಗೆ ದೂಡಬಹುದು. ಅವರ ಆರೋಗ್ಯದ ಬಗ್ಗೆ ಗಮನ ಕೊಡುವುದು ಅವಶ್ಯ. ಅಕ್ಟೋಬರ್ ನಂತರ, ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ಮೇಲುಗೈ ಸಾಧಿಸುತ್ತದೆ ಮತ್ತು ಕುಟುಂಬಕ್ಕಾಗಿ ಒಳ್ಳೆಯ ಕೆಲಸಗಳಲ್ಲಿ ತೊಡಗುತ್ತಾರೆ. ಆಸ್ತಿ ಲಾಭದ ಅವಕಾಶ.

ಪರಿಹಾರ: ಪ್ರತಿದಿನ ಹಣೆಯ ಮೇಲೆ ಕುಂಕುಮದ ತಿಲಕವನ್ನು ಹಚ್ಚಬೇಕು.

ಕುಂಭ ರಾಶಿ

ಈ ರಾಶಿಯವರಿಗೆ ಗುರು ಗ್ರಹವು ಎರಡನೇ ಮನೆ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದೆ. ಗುರುಗ್ರಹದ ಸಂಚಾರವು ಮೂರನೇ ಮನೆಯಲ್ಲಿ ನಡೆಯುತ್ತದೆ. ಮಿಶ್ರಫಲಗಳು ಗೋಚರಿಸಲಿವೆ. ಈ ಸಂಕ್ರಮಣ ನಡೆಯುವ ಸಮಯದಲ್ಲಿ, ರಾಹು, ಸೂರ್ಯ ಮತ್ತು ಬುಧ ಗುರುವಿನ ಸಂಯೋಗದಲ್ಲಿ ಬರುತ್ತವೆ. ಈ ಸಮಯದಲ್ಲಿ ಗೆಳೆಯರ ಜೊತೆ ಮೋಜು ಮಸ್ತಿ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಬರಬಹುದು. ಹಣಕಾಸಿನ ತೊಂದರೆಗಳು ಬರಬಹುದು. ಆಲಸ್ಯವನ್ನು ತೊರೆಯದಿದ್ದಲ್ಲಿ ಪ್ರಮುಖವಾದ ಕೆಲಸದಲ್ಲಿ ವಿಳಂಬಗತಿ ತೋರಬಹುದು. ಒಡಹುಟ್ಟಿದವರ ಆರೋಗ್ಯ ಸಂಬಂಧಿತ ಸಮಸ್ಯೆಗಳು ಚಿಂತೆಗೀಡು ಮಾಡಬಹುದು. ಕನಿಷ್ಟ ಅಕ್ಟೋಬರ್ ವರೆಗೆ ವಿರಾಮ ಪ್ರವಾಸಗಳಿಗಾಗಿ ಪ್ರಯಾಣಿಸಬಾರದು. ಅಂತಹ ಪ್ರವಾಸಗಳಲ್ಲಿ ಆರ್ಥಿಕ ನಷ್ಟ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಗಂಟು ನೋವು ಅಥವಾ ಭುಜದ ಬೇನೆ ತಲೆದೋರಬಹುದು. ಈ ಮೊದಲೇ ಕಿವಿ ನೋವಿದ್ದಲ್ಲಿ ಉಲ್ಬಣಗೊಳ್ಳಬಹುದು. ಈ ಸಂಕ್ರಮಣವು ವೈವಾಹಿಕ ಜೀವನದಲ್ಲಿ ಆನಂದವನ್ನು ನೀಡಿ ಸಂಗಾತಿಯಿಂದ ಸುಖವನ್ನು ನೀಡುತ್ತದೆ. ಕಷ್ಟಪಟ್ಟು ಕೆಲಸ ಮಾಡಿದಲ್ಲಿ ಅದೃಷ್ಟ ಖುಲಾಯಿಸಿ ಆರ್ಥಿಕ ಸುಧಾರಣೆಯ ಸಾಧ್ಯತೆಗಳಿವೆ. ವ್ಯವಹಾರದಲ್ಲಿ, ಯಶಸ್ಸಿನ ಅವಕಾಶಗಳು ಬರಬಹುದು.

ಪರಿಹಾರ: ಈ ಸಂಪೂರ್ಣ ಸಂಕ್ರಮಣ ಸಮಯದಲ್ಲಿ, ಹಳದಿ ಬಣ್ಣದ ಕರವಸ್ತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳಿ.

ಮೀನ ರಾಶಿ

ಗುರುವು ಮೀನ ರಾಶಿಯ ಅಧಿಪತಿ. ಈ ರಾಶಿಯವರ ಹತ್ತನೇ ಮನೆಯ ಅಧಿಪತಿ. ಈ ಸಂಕ್ರಮಣವು ಎರಡನೇ ಮನೆಯಲ್ಲಿ ನಡೆಯುತ್ತದೆ. ಅಸಮತೋಲಿತ ಮತ್ತು ಅಪೌಷ್ಟಿಕತೆಯ ಆಹಾರವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುವುದರಿಂದ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಮಾತಿನಲ್ಲಿ ಹಿಡಿತವಿಲ್ಲದಿದ್ದರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆರ್ಥಿಕವಾಗಿ, ಈ ಸಮಯವು ಆರಂಭದಲ್ಲಿ ಸವಾಲಿನದಾಗಿರುತ್ತದೆ. ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಕುಟುಂಬದಲ್ಲಿ ಜಗಳಗಳು ನಡೆಯುವುದನ್ನು ನೋಡಬಹುದು. ಆರ್ಥಿಕ ಪರಿಸ್ಥಿತಿಗಳಲ್ಲಿ ಸಮೃದ್ಧಿಯು ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಬರುತ್ತದೆ. ಹಣಕಾಸಿನ ಉಳಿತಾಯದಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ವಿರೋಧಿಗಳು ಮತ್ತು ಶತ್ರುಗಳು ಸಮಸ್ಯೆ ಒಡ್ಡಿದರೂ ಅವರಿಗಿಂತ ಒದು ಹೆಜ್ಜೆ ಮುಂದಿದ್ದು ಯಶಸ್ಸು ಹೊಂದುತ್ತಾರೆ. ಸಂಗಾತಿಯ ಮನೆಯವರ ಜೊತೆ ಸೌಹಾರ್ದ ಸಂಬಂಧವಿರಿಸುವುದು ಒಳಿತು. ಕೆಲಸದ ಕ್ಷೇತ್ರಕ್ಕೆ ಹೆಚ್ಚು ಶ್ರಮ ಮತ್ತು ಕಠಿಣ ಪರಿಶ್ರಮವನ್ನು ನೀಡಬೇಕಾಗುತ್ತದೆ ಮತ್ತು ಗಮನವನ್ನು ಬೇರೆಡೆಗೆ ತಿರುಗಿಸದೆ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಮಾತ್ರ ಯಶಸ್ಸನ್ನು ಪಡೆಯುತ್ತಾರೆ. ಗುರು ಸಂಚಾರ 2023 ಆರ್ಥಿಕವಾಗಿ ಸದೃಢಗೊಳಿಸುತ್ತದೆ. ಕುಟುಂಬಕ್ಕೆ ಹೊಸ ಸದಸ್ಯರು ಬರಬಹುದು, ಅಥವಾ ಮದುವೆಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ಇರುತ್ತದೆ, ಇದರಿಂದಾಗಿ ಕುಟುಂಬದಲ್ಲಿ ಸಂತೋಷ ನೆಲೆಸಲಿದೆ.

ಪರಿಹಾರ: ಗುರುವಾರದಂದು ಚಿನ್ನದ ಉಂಗುರದಲ್ಲಿ ಮಾಡಿಸಿದ ಹಳದಿ ನೀಲಮಣಿಯನ್ನು ತೋರು ಬೆರಳಿಗೆ ಧರಿಸಿ.

ಮಾಹಿತಿ: ಆಸ್ಟ್ರೋಸೇಜ್/ ಆಸ್ಟ್ರೋಗುರು ಮೃಗಾಂಕ್

ವಿ.ಸೂ: ಈ ಲೇಖನ ಕೇವಲ ಮಾಹಿತಿಗಾಗಿ ಮಾತ್ರ. ಹೆಚ್ಚಿನ ವಿವರಗಳಿಗೆ ತಜ್ಞ ಜ್ಯೋತಿಷಿಗಳ ಸಲಹೆ ಪಡೆಯುವುದು ಒಳಿತು.