ಹಿಜಾಬ್ ವಿವಾದದ ಬಗ್ಗೆ ಶಿಕ್ಷಣ ಸಚಿವರ ನಿಲುವು ಸ್ವಾಗತಾರ್ಹ: ಯಶ್ ಪಾಲ್ ಸುವರ್ಣ.

ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಉಂಟಾದ ವಿವಾದದ ಬಗ್ಗೆ ಕಾಲೇಜು ಧಾರ್ಮಿಕ ಆಚರಣೆಯ ಕೇಂದ್ರವಲ್ಲ ಈ ಬಗ್ಗೆ ಯಾವುದೇ ಅಶಿಸ್ತಿಗೆ ಅವಕಾಶವಿಲ್ಲವೆನ್ನುವ ಮೂಲಕ ಕಠಿಣ ನಿಲುವು ತಳೆದ ಶಿಕ್ಷಣ ಸಚಿವರಾದ ಶ್ರೀ ನಾಗೇಶ್ ರವರ ನಿರ್ಧಾರವನ್ನು ಸ್ವಾಗತಿಸುವುದಾಗಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಹಿಜಾಬ್ ವಿಚಾರದಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು ಗೊಂದಲ ಸೃಷ್ಟಿಸಿ ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಹಾಳುಗೆಡವಿ ಇತರ ವಿದ್ಯಾರ್ಥಿಗಳ ವ್ಯಾಸಾಂಗಕ್ಕೂ ಸಮಸ್ಯೆ ಸೃಷ್ಟಿಸುತ್ತಿದ್ದರೆ.

ಮತೀಯವಾದಿ ಸಂಘಟನೆಗಳು ಕೆಲವು ಸಮಾಜಘಾತುಕ ಶಕ್ತಿಗಳ ಕುಮ್ಮಕ್ಕಿನಿಂದ ಈ ಘಟನೆಯನ್ನು ರಾಜಕೀಯ ಉದ್ದೇಶದಿಂದ ರಾಷ್ಟ್ರಮಟ್ಟದಲ್ಲಿ ಅಪಪ್ರಚಾರ ನಡೆಸಿ ಕಾಲೇಜಿನ ಗೌರವಕ್ಕೆ ಮಸಿ ಬಳಿಯುವ ಕಾರ್ಯದಲ್ಲಿ ವ್ಯಸ್ತರಾಗಿದ್ದು ಶಿಕ್ಷಣ ವ್ಯವಸ್ಥೆಗೆ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಗೆ ಕಳಂಕ ತರುವ ಪ್ರಯತ್ನದಲ್ಲಿ ತೊಡಗಿದ್ದರೆ.

ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾಲೇಜಿನಲ್ಲಿ ಸಮವಸ್ತ್ರದ ನಿಯಮಗಳನ್ನು ಪಾಲಿಸದೆ ಹಿಜಾಬ್ ಬಗ್ಗೆ ವಿವಾದ ಸೃಷ್ಟಿಸುವ ವಿದ್ಯಾರ್ಥಿನಿಯರ ವರ್ತನೆ ದುರದೃಷ್ಟಕರ.

ಕಾಲೇಜಿನ ನಿಯಮವನ್ನು ಕಡ್ಡಾಯವಾಗಿ ಪಾಲಿಸುವುದು ಎಲ್ಲಾ ವಿದ್ಯಾರ್ಥಿಗಳ ಕರ್ತವ್ಯ. ತಮ್ಮ ಧಾರ್ಮಿಕ ಆಚರಣೆಗಳಿಗಾಗಿ ಕಾಲೇಜಿನ ಶಿಸ್ತು ಉಲ್ಲಂಘಿಸಲು ಶಾಲಾ ಆಡಳಿತ ಮಂಡಳಿ ಅವಕಾಶ ನೀಡುವುದಿಲ್ಲ ಹಾಗೂ ಈ ಕಾಲೇಜು ನಿಯಮವನ್ನು ಪಾಲಿಸಲು ಕಷ್ಟವಾದಲ್ಲಿ ತಮ್ಮ ಧಾರ್ಮಿಕ ಆಚರಣೆಗೆ ಅವಕಾಶವಿರುವಲ್ಲಿ ಶಿಕ್ಷಣ ಮುಂದುವರಿಸಲಿ, ಕಾಲೇಜಿನ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.