ನವದೆಹಲಿ: ಗ್ರಾಹಕರಿಗೆ ಅಗತ್ಯವಾದ ಪರಿಹಾರವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರವು ವಾರ್ಷಿಕ 20 ಲಕ್ಷ ಮೆಟ್ರಿಕ್ ಟನ್ಗಳಷ್ಟು ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ನಿಂದ ವಿನಾಯಿತಿ ನೀಡಿದೆ.
ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಆದೇಶವು ಮೇ 25, 2022 ರಂದು ಜಾರಿಗೆ ಬರಲಿದೆ ಮತ್ತು ಮಾರ್ಚ್ 31, 2024 ರ ನಂತರ ಅನ್ವಯವು ನಿಲ್ಲಿಸಲಾಗುತ್ತದೆ.
ಈ ಬಗ್ಗೆ ಎಂದು ಸಿಬಿಐಸಿ ಟ್ವೀಟ್ ಮಾಡಿದೆ.
Central Govt. has allowed import of a quantity of 20 Lakh MT each of Crude Soyabean Oil & Crude Sunflower Oil per year for a period of 2 years at Nil rate of customs duty & Agricultural Infrastructure and Development Cess.
This will provided significant relief to the consumers. pic.twitter.com/jvVq0UTfvv
— CBIC (@cbic_india) May 24, 2022
ಭಾರತದಲ್ಲಿ ಖಾದ್ಯ ತೈಲ ಬೆಲೆಯಲ್ಲಿನ ಏರಿಕೆಯ ಹಿನ್ನೆಲೆಯಲ್ಲಿ ಈ ಪ್ರಕಟಣೆ ಬಂದಿದೆ. ಭಾರತವು ವಿಶ್ವದ ಅತಿದೊಡ್ಡ ಸಸ್ಯಜನ್ಯ ತೈಲ ಆಮದುದಾರರಲ್ಲಿ ಒಂದಾಗಿದೆ ಮತ್ತು ಅದರ 60 ಪ್ರತಿಶತದಷ್ಟು ಅಗತ್ಯಗಳಿಗಾಗಿ ವಿದೇಶೀ ಆಮದುಗಳನ್ನು ಅವಲಂಬಿಸಿದೆ. ಸೂರ್ಯಕಾಂತಿ ಎಣ್ಣೆಯನ್ನು ಮುಖ್ಯವಾಗಿ ಉಕ್ರೇನ್ ಮತ್ತು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಉಕ್ರೇನ್ ಮತ್ತು ರಷ್ಯಾ ಯುದ್ದ ಸನ್ನಿವೇಶದಿಂದಾಗಿ ತೈಲ್ ಬೆಲೆಗಳು ಗಗನಕ್ಕೇರಿವೆ. ದೇಶೀ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳನ್ನು ಸ್ಥಿರವಾಗಿರಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.