ಉಡುಪಿ:ಕೃಷ್ಣಮಠದಲ್ಲಿ ಗ್ರಹಣ ಕಾಲದ ವಿಶೇಷ ಪೂಜೆ

ಉಡುಪಿ:   ಕೃಷ್ಣ ಮಠದ ಮಧ್ವ ಸರೋವರದಲ್ಲಿ ಸೂರ್ಯ ಗ್ರಹಣ ಪ್ರಯುಕ್ತ  ಗ್ರಹಣ ಕಾಲದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ  ವಿಶ್ವಪ್ರಸನ್ನತೀರ್ಥ ತೀರ್ಥ ಶ್ರೀಪಾದರು,ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು  ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸ್ನಾನಮಾಡಿ ಗ್ರಹಣಕಾಲದಲ್ಲಿ ಜಪಾನುಷ್ಠಾನ ಮಾಡಿ ಕೃಷ್ಣ ದೇವರ ವಿಶೇಷ ಪೂಜೆ ನಡೆಸಿದರು.ಈ ಸಂದರ್ಭದಲ್ಲಿ  ಅಧಿಕ ಸಂಖ್ಯೆಯಲ್ಲಿ  ಭಕ್ತಾಧಿಗಳು ಆಗಮಿಸಿ  ಸ್ನಾನ ಮಾಡಿ ಜಪ ಪಾರಾಯಣಾದಿಗಳನ್ನು ಮಾಡಿದರು.