ವಯಸ್ಸು 35 ದಾಟಿದವರು ಈ ಆಹಾರಗಳನ್ನು ತಿನ್ನದೇ ಇರಬೇಡಿ ಮತ್ತೆ!

ನೋಡ ನೋಡುತ್ತಿದ್ದಂತೆಯೇ ಮನುಷ್ಯನಿಗೆ ವಯಸ್ಸಾಗಿಬಿಡುತ್ತದೆ.ಯೌವ್ವನದ ದಿನಗಳನ್ನು ಕಳೆದು ಮಧ್ಯ ವಯಸ್ಸಿಗೆ ಬರುತ್ತಿದ್ದಂತೆಯೇ ಡಯಾಬಿಟಿಸ್,ಬಿಪಿ ಯಂತಹ ಕೆಲವೊಂದು ಸಮಸ್ಯೆಗಳು ಅತೀಯಾಗಿ ಕಾಡಲು ತೊಡಗುತ್ತದೆ. ಜೀವನಶೈಲಿಯಲ್ಲೂ ಆದ ಕೆಲವೊಂದು ಬದಲಾವಣೆಗಳಿಂದ ಈ ಸಮಸ್ಯೆಗಳು ಉದ್ಭವಿಸುವುದು ಸಾಮಾನ್ಯವಾಗಿದೆ.ಆದರೆ ಉತ್ತಮ ಜೀವಶೈಲಿಯ ನಿರ್ವಹಣೆಯಿಂದ ಕ್ರಮಬದ್ಧವಾದ ಆಹಾರ ಸೇವನೆಯಿಂದ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಹಾಗಾದ್ರೆ ಬನ್ನಿ 35 ವರ್ಷ ದಾಟಿದ ಮೇಲೆ ಯಾವುದೆಲ್ಲಾ ಆಹಾರವನ್ನು ಸೇವಿಸಬೇಕು ಎನ್ನುವ ಮಾಹಿತಿ ಇಲ್ಲಿದೆ.

♦ ಬ್ಲೂ ಬೆರ್ರಿ ಹಣ್ಣು : ಬ್ಲೂ ಬೆರ್ರಿ ಹಣ್ಣಿನಲ್ಲಿ ವಿಟಮಿನ್ ‘ಸಿ’, ವಿಟಮಿನ್ ‘ಕೆ’, ನಾರಿನಾಂಶ, ಆಂಟಿ ಆಕ್ಸಿಡೆಂಟ್ ಅಂಶ, ಹಾಗೂ ಖನಿಜಾಂಶಗಳಿದ್ದು, ಈ ಹಣ್ಣನ್ನು ತಿಂದರೆ ದೇಹದ ಅಂಗಾಂಗಗಳ ಚಲನೆ ಹಾಗೂ ಕಾರ್ಯ ಚಟುವಟಿಕೆಯಲ್ಲಿನ ಸಮಸ್ಯೆಗಳು ದೂರವಾಗುತ್ತದೆ.ಉತ್ತಮ ಕ್ಯಾಲೊರಿ ಕೂಡ ಇದರಲ್ಲಿದೆ.

 

♦ ಮೀನು : ಮೀನು ತಿನ್ನುವುದರಿಂದ ವಯಸ್ಸಾಗುತ್ತಿದ್ದಂತೆ ಕಾಡುವ ಮರೆವಿನ ಸಮಸ್ಯೆ ಕಡಿಮೆಯಾಗುತ್ತದೆ ಎನ್ನಲಾಗಿದೆ.ಯಾಕೆಂದರೆ ಮೀನಿನಲ್ಲಿ ಒಮೆಗಾ – ಫ್ಯಾಟಿ ಆಸಿಡ್ ಅಂಶಗಳು ಹೃದಯ ಸಂಬಂಧಿ ತೊಂದರೆ ಇರುವವರು ಸೇವಿಸಿದರೆ ಉತ್ತಮ.

♦ ಬಾದಾಮಿ ಬೀಜ: -ಡಯಾಬಿಟೀಸ್ ಸಮಸ್ಯೆ ಇರುವವರು ಬಾದಾಮಿ ಬೀಜಗಳನ್ನು ತಿನ್ನುವುದರಿಂದ ದೇಹದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆಯಾಗಿಸಬಹುದು. ಇದು ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ.  ಹೃದಯ ಸಂಬಂಧಿ ತೊಂದರೆಗಳನ್ನು ತಡೆಗಟ್ಟುತ್ತದೆ. ದೇಹದ ಬಾದಾಮಿಯು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಪಚನಕ್ರಿಯೆ ಸುಧಾರಿಸುತ್ತದೆ. ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಅಂಶ ಇದರಲ್ಲಿದೆ.

♦ ಬೆಳ್ಳುಳ್ಳಿ : ಬೆಳ್ಳುಳ್ಳಿ  ದೇಹಕ್ಕೆ ತುಂಬಾ ಉಪಯುಕ್ತವಾದದು. ಕ್ಯಾನ್ಸರ್ ನಂತಹ ದೊಡ್ಡ ಸಮಸ್ಯೆಯಿಂದ ಹಿಡಿದು ಕೆಮ್ಮು, ನೆಗಡಿಯಂತಹ ಸಣ್ಣ ಪುಟ್ಟ ಸಮಸ್ಯೆಗಳ ವಿರುದ್ಧ ಹೋರಾಡುವ ಶಕ್ತಿ ಇದಕ್ಕಿದೆ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆ, ಕೊಲೆಸ್ಟ್ರಾಲ್, ಹಾಗೂ ಡಿಮೆನ್ಷಿಯಾ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸೇವಿಸಿದರೆ ಚೆನ್ನ.

♦ ಓಟ್ಸ್ : ನಾರಿನ ಅಂಶವು ಓಟ್ಸ್ ನಲ್ಲಿ ಇರುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಹಾಗೇ ಮಧುಮೇಹ, ಅತಿಸಾರ, ಮಲಬದ್ಧತೆ ಮತ್ತು ಕರುಳಿಗೆ ಸಂಬಂಧಿಸಿದ ಕಾಯಿಲೆಯನ್ನು ತಡೆಗಟ್ಟುತ್ತದೆ. ಸ್ನಾಯುಗಳಿಗೆ ಬೇಕಾದ ಪ್ರೋಟೀನ್ ಅಂಶಗಳು ಇದರಲ್ಲಿದೆ.  ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ಇದು ಕಡಿಮೆಮಾಡುತ್ತದೆ.

♦ ಟೊಮೆಟೋ : ಟೊಮೆಟೋ ಜ್ಯೂಸ್ ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೊಟ್ಟೆಯ, ಶ್ವಾಸಕೋಶದ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಕಾಯಿಲೆಯಿಂದ ದೂರಮಾಡುತ್ತದೆ.ಟೊಮೆಟೋದಲ್ಲಿರುವ ಲೈಕೋಪಿನ ಎಂಬ ಆಂಟಿ ಆಕ್ಸಿಡೆಂಟ್ ಅಂಶಗಳು ಇರುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶಗಳು ರಚನೆಯಾಗದಂತೆ ಹಾಗೂ ಬೇರೆ ಭಾಗಗಳಿಗೆ ಹರಡದಂತೆ ತಡೆಯುತ್ತದೆ.