ಬ್ರೆಡ್ ,ಸಾಧಾರಣ ಎಲ್ಲರ ಮನೆಯಲ್ಲೂ ಉಪಯೋಗಿಸುವ ಸಾಮಾನ್ಯ ಖಾದ್ಯ. ಬ್ರೆಡ್ ಜಾಮ್, ಬ್ರೆಡ್ ಆಮ್ಲೇಟ್, ಬ್ರೆಡ್ ಬೋಂಡಾ ಮಾಡಿ ನೀವೆಲ್ಲಾ ಸವಿದಿರಬಹುದು.ಆದರೆ ಇನ್ನೊಂದು ಬ್ರೆಡ್ ನಿಂದ ಮಾಡಬಹುದಾದ ಸಿಂಪಲ್ ರೆಸಿಪಿಯನ್ನು ನಾವ್ ಹೇಳ್ತೇವೆ ನೋಡಿ ಅದುವೇ ಬ್ರೆಡ್ ಮಂಚೂರಿ.
ಮಂಚೂರಿ ಮಾಡೋಕೆ ಏನೇನ್ ಬೇಕು?
ಜೋಳದ ಹಿಟ್ಟು– 2 ಚಮಚ , ಮೈದಾ ಹಿಟ್ಟು – 4 ಚಮಚ, ಕಾಳುಮೆಣಸಿನ ಪುಡಿ– ಅರ್ಧ ಚಮಚ, ಶುಂಠಿ, ಬೆಳ್ಳುಳ್ಳಿ ಪೇಸ್ಟ್– ಅರ್ಧ ಚಮಚ, ಶುಂಠಿ, ಬೆಳ್ಳುಳ್ಳಿ– ಸಣ್ಣಗೆ ಹೆಚ್ಚಿದ್ದು ಸ್ವಲ್ಪ, ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು, ಹಸಿಮೆಣಸಿನ ಕಾಯಿ– 1
ಹಸಿರು ಈರುಳ್ಳಿ- ಸ್ವಲ್ಪ, ಕ್ಯಾಪ್ಸಿಕಂ- ಸ್ವಲ್ಪ, ವಿನೇಗರ್– 2 ಚಮಚ, ಸೋಯಾ ಸಾಸ್– 2 ಚಮಚ, ರೆಡ್ ಚಿಲ್ಲಿ ಸಾಸ್– 2 ಚಮಚ
ಟೊಮೆಟೊ ಕೆಚಪ್- 4 ಚಮಚ, ಕಾಳು ಮೆಣಸಿನ ಪುಡಿ – ಅರ್ಧ ಚಮಚ, ಉಪ್ಪು-ರುಚಿಗೆ ತಕ್ಕಷ್ಟು
ಹೇಗೆ ಮಾಡೋದು?
ಒಂದು ಪಾತ್ರೆ ತೆಗೆದುಕೊಂಡು ಆ ಪಾತ್ರೆಗೆ ಜೋಳದ ಹಿಟ್ಟು, ಮೈದಾ ಹಿಟ್ಟು, ಉಪ್ಪು, ಕಾಳುಮೆಮಸಿನ ಪುಡಿ ಹಾಗೂ ಅರ್ಧ ಚಮಚ ಶುಂಟಿ, ಬೆಳ್ಳುಳ್ಳಿ ಪೇಸ್ಟ್, ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಅದಕ್ಕೆ ಕತ್ತರಿಸಿಕೊಂಡ ಬ್ರೆಡ್ ತುಂಡುಗಳನ್ನು ಅದ್ದಿ, ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೂ ಕರಿಯಿರಿ.
ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ 2-3 ಚಮಚ ಎಣ್ಣೆ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಕ್ಯಾಪ್ಸಿಕಂ, ಹರಿರು ಈರುಳ್ಳಿ ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಿ.
ಆ ಬಳಿಕ ವಿನೇಗರ್, ಸೊಯಾ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮೆಟೋ ಕೆಚಪ್ ಹಾಕಿ ಮಿಶ್ರಣ ಮಾಡಿ. ಕಾಳುಮೆಣಸಿನ ಪುಡಿ ಹಾಕಿ ಈಗಾಗಲೇ ಎಣ್ಣೆಯಲ್ಲಿ ಕರಿದ ಬ್ರೆಡ್ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾಗ ಬ್ರೆಡ್ ಮಂಚುರಿ ಸವಿಯಲು ಸಿದ್ಧ. ಸಂಜೆಯ ವೇಳೆಗಂತೂ ಇದೊಂದು ರುಚಿಕರ ತಿಂಡಿ.