ಮಣಿಪಾಲ: ಲಕ್ಷ್ಮೀಂದ್ರ ನಗರದಲ್ಲಿ ಈಸಿ ಬೈ ನೂತನ ಮಳಿಗೆ ಉದ್ಘಾಟನೆ

ಮಣಿಪಾಲ: ಇಲ್ಲಿನ ಲಕ್ಷ್ಮೀಂದ್ರ ನಗರದಲ್ಲಿ ದುಬೈನ ಲ್ಯಾಂಡ್‍ಮಾರ್ಕ್ ಗ್ರೂಪ್ ನ ಬಟ್ಟೆ ಮಳಿಗೆ ಈಸಿ ಬೈ ನ ನೂತನ ಶಾಖೆ ಶುಭಾರಂಭಗೊಂಡಿದೆ. ಕರ್ನಾಟಕದಲ್ಲಿ ಇದು ಈಸಿ ಬೈ ನ 25ನೇ ಮಳಿಗೆ ಮತ್ತು ದೇಶದಲ್ಲಿ 125 ನೇ ಮಳಿಗೆಯಾಗಿದೆ. ಈ ವಿಶಾಲವಾದ ಮಳಿಗೆಯು 8000 ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, ಇಡೀ ಕುಟುಂಬ ಬಯಸುವ ಅತ್ಯಾಧುನಿಕ ವಸ್ತ್ರಗಳನ್ನು ಒದಗಿಸುತ್ತದೆ. ಇಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಉಡುಪುಗಳ ಪ್ರತ್ಯೇಕ ವಿಭಾಗಗಳನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ಬೇಕಾದ ಅಗತ್ಯ ವಸ್ತುಗಳು ಒಂದೇ ಕಡೆ ದೊರಕುತ್ತದೆ.

ನೂತನ ಮಳಿಗೆಯ ಕುರಿತು ಮಾತನಾಡಿದ ಈಸಿ ಬೈ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಅಯ್ಯರ್ , ದೇಶದಲ್ಲಿ 125ನೇ ಮಳಿಗೆ ಮತ್ತು ಕರ್ನಾಟಕದಲ್ಲಿ 25ನೇ ಮಳಿಗೆಯನ್ನು ಮಣಿಪಾಲದಲ್ಲಿ ಪ್ರಾರಂಭಿಸಿರುವುದು ನಮಗೆ ಸಂತೋಷ ತಂದಿದೆ. ಈಸಿ ಬೈ ಎಕ್ಸ್ ಕ್ಲೂ ಸಿವ್ ಸ್ಟೋರ್ ಟ್ರೆಂಡಿ ಫ್ಯಾಶನ್ ಅನ್ನು ಉತ್ತಮ ಬೆಲೆಯಲ್ಲಿ ಗ್ರಾಹಕರಿಗೆ ನೀಡುತ್ತದೆ. ಆದರೆ ವಿಶೇಷವಾಗಿ ವ್ಯಾಲ್ಯೂ ಫ್ಯಾಶನ್‍ನಲ್ಲಿ ಔಟ್‍ಲೆಟ್‍ಗಳ ನಿರ್ಬಂಧಿತ ಆಯ್ಕೆಯನ್ನು ಹೊಂದಿದೆ. ಈಸಿ ಬೈ ಕೇವಲ ರೂ. 69 ರಿಂದ ಪ್ರಾರಂಭವಾಗುವ ಹಲವು ಸ್ಟೈಲ್‍ಗಳನ್ನು ನೀಡಲು ಮುಂದಾಗಿದೆ. ಟ್ರೆಂಡಿ ಮತ್ತು ಸೊಗಸಾದ ವಿವಿಧ ಶ್ರೇಣಿಯ ಮತ್ತು ಶೈಲಿಯ ಉಡುಪುಗಳು ಉತ್ತಮ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ಈ ಪ್ರದೇಶದಲ್ಲಿ ಈಸಿ ಬೈ ಶಾಖೆಯನ್ನು ವಿಸ್ತರಿಸಿರುವುದು ಸಂತೋಷದ ವಿಚಾರ. ಇನ್ನೂ ಹೆಚ್ಚಿನ ಮಳಿಗೆಗಳನ್ನು ತೆರೆಯುವ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ನಿಮಿತ್ತ ಇಂದು ಈಸಿ ಬೈ ನಲ್ಲಿ ಗ್ರಾಹಕರಿಗೆ ಉದ್ಘಾಟನಾ ಕೊಡುಗೆ ನೀಡಲಾಗಿತ್ತು.