ಪೂರ್ಣಪ್ರಜ್ಞ ಕಾಲೇಜು: ಭೂಮಿ ದಿನ ಕಾರ್ಯಕ್ರಮ

ಉಡುಪಿ: ಪೂರ್ಣಪ್ರಜ್ಞ ಕಾಲೇಜು (ಆಟೋನಾಮಸ್) ಸಸ್ಯಶಾಸ್ತ್ರ ವಿಭಾಗ ಮತ್ತು ಇಕೋ ಕ್ಲಬ್
ವತಿಯಿಂದ ಭೂಮಿದಿನ ಆಚರಿಸಲಾಯಿತು.

ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ಉಪನ್ಯಾಸಕ ಗಣೇಶ್ ಪ್ರಸಾದ್ ಜಿ. ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ‘ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ಸ್’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹೆಚ್ಚುತ್ತಿರುವ ತಾಪಮಾನದಿಂದ ಹೀಟ್ ವೇವ್ ಉಂಟಾಗುತ್ತಿದ್ದು ಇದರಿಂದ ಅನೇಕ ದೀರ್ಘಕಾಲಿಕ ಪರಿಣಾಮಗಳು ಉಂಟಾಗುತ್ತಿವೆ. ಜಾಗತಿಕ ಮಟ್ಟದಲ್ಲಿ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹಲವಾರು ಅಂಕಿಅಂಶಗಳ ಸಹಿತ ವಿವರಿಸಿದರು. ಮದುವೆ ಇನ್ನಿತರ ಸಮಾರಂಭಗಳಲ್ಲಿ ಅನಾವಶ್ಯಕವಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ನೀಡುವುದರ ಬದಲಿಗೆ ಸ್ಟೀಲ್ ಲೋಟಗಳನ್ನು ನೀಡಿದರೆ ಇವುಗಳನ್ನು ಮರುಬಳಕೆ ಮಾಡಬಹುದು. ಲೋಟಗಳನ್ನು ಸ್ವಚ್ಛ ಮಾಡುವವರಿಗೂ ಒಂದು ದಿನದ ಉದ್ಯೋಗ ಸಿಕ್ಕಿದಂತಾಗುತ್ತದೆ. ಬದಲಾವಣೆ ನಮ್ಮ ಕೈಯಲ್ಲೇ ಇದೆ ಎಂದರು.

ಬಳಿಕ ವಿದ್ಯಾರ್ಥಿಗಳು ಸಂವಾದ ನಡೆಸಿದರು.

ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ಸಿ ಭಟ್ ಸ್ವಾಗತಿಸಿ ವಂದಿಸಿದರು. ಉಪನ್ಯಾಸಕಿ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.