ಕಿವಿಗೆ ಇಯರ್ ಫೋನ್ ಇಲ್ಲಾಂದ್ರೆ ಬಸ್ ಪ್ರಯಾಣನೇ ಸಾಗಲ್ಲ ಅನ್ನೋರು, ಇಯರ್ ಫೋನ್ ಹಾಕಿ ಹಾಡು ಕೇಳದಿದ್ದರೆ ನಿದ್ದೆನೇ ಬರೋಲ್ಲ ಅನ್ನೋರು ಮೊದಲು ನಾವ್ ಹೇಳೋದನ್ನು ಗಮನವಿಟ್ಟು ಕೇಳಿ. ಆ ಮೇಲೆ ಇಯರ್ ಫೋನ್ ಸ್ವರವನ್ನು ಕೇಳಬೇಕಾ? ಬೇಡವಾ ಅಂತ ಡಿಸೈಡ್ ಮಾಡಿ.
ಇಯರ್ ಫೋನ್ ಬಳಸುವವರೇ ಇಲ್ಲಿ ಕೇಳಿ:
- ಖುಷಿ ಕೊಡತ್ತೆ ಅಂತ ಯಾವತ್ತೂ ಇಯರ್ ಫೋನ್ ಹಾಕಿಕೊಂಡೇ ಇದ್ರೆ ಆದಷ್ಟು ಬೇಗ ಕಿವಿಯ ಸಮಸ್ಯೆ ಬರೋದಂತೂ ಖಂಡಿತ. ಸಣ್ಣ ವಯಸ್ಸಿನಲ್ಲೇ ಕಿವಿಯ ಕಾರ್ಯಕ್ಷಮತೆ ಕಡಿಮೆ ಆಗೋದಲ್ಲದೇ, ಕಿವಿ ನೋವು. ಕಿವಿ ಸೋರುವಿಕೆಯೊಂದಿಗೆ ಮೇಲ್ಪದರಕ್ಕೆ ತೊಂದರೆಯುಂಟಾಗಿ ಕಿವುಡಾಗುವ ಸಾಧ್ಯತೆ ಹೆಚ್ಚಿರುತ್ತದೆ.
- ಅತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರದಿಂದ ಅತ್ಯುತ್ತಮ ಶಬ್ದ ಹೊಮ್ಮಿಸುವ ಇಯರ್ ಫೋನ್ ಗಳು ಬಳಕೆಗೆ ಬಂದಿವೆ. ಇವು ಕಿವಿಗೆ ಹಾಕಿದಾಗ ಗಾಳಿಯು ಕಿವಿಯೊಳಗೆ ಹೋಗುವುದನ್ನು ತಡೆಗಟ್ಟಿ ಅಪಾಯಕ್ಕೆ ಕಾರಣವಾಗುತ್ತಿವೆ.
- ಕಾರ್, ಬೈಕ್ ಮುಂತಾದ ವಾಹನಗಳ ಚಾಲನೆಯ ಸಂದರ್ಭದಲ್ಲಿ ಕಿವಿಗೆ ಇಯರ್ ಫೋನ್ ಹಾಕುವುದರಿಂದ ಇತರ ವಾಹನಗಳ ಶಬ್ದ ಕೇಳದೇ, ಉಂಟಾಗುವ ಅಪಘಾತಗಳ ಸಂಖ್ಯೆ ಜಾಸ್ತಿ ಎಂಬುದು ಅಂಕಿ-ಅಂಶಗಳಿಂದ ತಿಳಿದು ಬರುವ ವಿಚಾರ. ಇದು ಸತ್ಯವೂ ಹೌದು.
- ಜೋರಾದ ವಾಲ್ಯೂಮ್ ಇಟ್ಟುಕೊಂಡು, ಪಕ್ಕದವರಿಗೂ ಕೇಳುವಂತೆ ಹಾಡು ಹಾಕಿಕೊಳ್ಳವುದರಿಂದ ಹೃದಯ ರೋಗ ಬರುವುದಂತೂ ಗ್ಯಾರೆಂಟಿ.
- ಇಯರ್ ಫೋನ್ ಹೆಚ್ಚಾದ ಬಳಕೆಯಿಂದ ಕಿವಿ ಇನ್ಫೆಕ್ಷನ್, ಕ್ಯಾನ್ಸರ್ ಹಾಗೂ ಅವುಗಳಿಂದ ಉತ್ಪತ್ತಿಯಾಗುವ ಎಲೆಕ್ಟ್ರೋಮ್ಯಾಗ್ನೆಟಿಕ್ ಅಲೆಗಳಿಂದ ಮೆದುಳಿನ ಸಮಸ್ಯೆಯಂತಹ ಮಾರಣಾಂತಿಕ ಖಾಯಿಲೆಗಳಿಂದ ನರಳುವ ಅಪಾಯ ಅತಿ ಹೆಚ್ಚು. ನೀವು ಇಷ್ಟೆಲ್ಲ ಓದಿಯೂ ಬೇಕಾಬಿಟ್ಟಿ ಇಯರ್ ಫೋನ್ ಬಳಸಿದ್ರೆ ಒಂದಿನ ನಿಮಗೂ ಮೇಲೆ ಹೇಳಿರುವ ಎಲ್ಲಾ ಸಮಸ್ಯೆಗಳು ಬರಬಹುದು. ಬೀ ಕೇರ್ ಫುಲ್.