ಬ್ರಹ್ಮಾವರ: ವಿದ್ಯುನ್ಮಾನ ಮತಯಂತ್ರ ಬಳಕೆ ಅರಿವು ಕಾರ್ಯಗಾರ

ಬ್ರಹ್ಮಾವರ: ಕರ್ನಾಟಕ ಸರ್ಕಾರ ಕಂದಾಯ ಇಲಾಖೆ, ತಹಶೀಲ್ದಾರ್ ಕಚೇರಿ ಉಡುಪಿ ತಾಲೂಕು, ರಾಷ್ಟ್ರೀಯ ಸೇವಾ ಯೋಜನೆ ಘಟಕ, ರಾಜ್ಯಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ ಎಸ್ಎಮ್ಎಸ್ ಕಾಲೇಜು ಬ್ರಹ್ಮಾವರ ಇದರ ಸಹಯೋಗದೊಂದಿಗೆ ವಿದ್ಯುನ್ಮಾನ ಮತಯಂತ್ರದ ಅರಿವು ಕಾರ್ಯಗಾರವು ಫೆ.28 ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ಸೆಕ್ಟರ್ ಅಧಿಕಾರಿಯಾಗಿದ್ದ ಡಾ. ಗುರುರಾಜ್ ಪ್ರಭು, ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಉಡುಪ, ಉಪನ್ಯಾಸಕ ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.