ಪಿ.ಎಂ ಕಿಸಾನ್ ಯೋಜನೆಗೆ ಆಗಸ್ಟ್ 15ರೊಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯ

ಉಡುಪಿ: ಕೃಷಿ ಇಲಾಖೆಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ
ತಮ್ಮ ಬ್ಯಾಂಕ್ ಖಾತೆಗಳಿಗೆ ಸಹಾಯಧನ ಪಡೆಯುತ್ತಿರುವ ಜಿಲ್ಲೆಯ ರೈತರು ಆಗಸ್ಟ್ 15 ರ ಒಳಗೆ ಸಮೀಪದ ಕಾಮನ್ ಸರ್ವೀಸ್ ಸೆಂಟರ್‌ಗಳಲ್ಲಿ ಅಥವಾ ಸ್ಮಾರ್ಟ್ಪೋನ್ ಬಳಸುತ್ತಿರುವ ರೈತರು ಪಿ.ಎಂ ಕಿಸಾನ್ ವೆಬ್ ಪೋರ್ಟಲ್ www.pmkisan.gov.in ತಂತ್ರಾಂಶದ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಇ-ಕೆವೈಸಿಯನ್ನು ಮಾಡಿಕೊಳ್ಳಬಹುದಾಗಿದೆ.

ಆಗಸ್ಟ್ 15 ರ ಒಳಗೆ ಇ-ಕೆವೈಸಿ ಮಾಡಿಸದೇ ಇರುವ ರೈತರಿಗೆ ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.