ಗೋಕರ್ಣ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 10 ಅಡಿ ಆಳದ ಕಲ್ಲು ಕ್ವಾರಿಗೆ ಬಿದ್ದ ಘಟನೆ ಗೋಕರ್ಣ ಚೌಡಗೇರಿ ಶಾಲೆಯ ಬಳಿ ಬುಧವಾರ ಮಧ್ಯರಾತ್ರಿ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬ ಅಸುನೀಗಿದ್ದಾನೆ.
ಮೂಲತಃ ಅಗರಗೋಣ ನಿವಾಸಿಯಾಗಿರುವ ಅಂಕೋಲಾದಲ್ಲಿ ನೆಲೆಸಿರುವ ಗೌರವ ದೇವರಾಜ ಗೋಳಿಕಟ್ಟೆ (25) ಮೃತ ದುರ್ದೈವಿ. ತಮ್ಮ ಮೂವರು ಗೆಳೆಯರೊಂದಿಗೆ ಅಗರಗೋಣದಿಂದ ಅಂಕೋಲಾಕ್ಕೆ ತಿರುಗಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.