ಮಾಳ ಮಂಜುಶ್ರೀ ಭಜನಾ ಮಂಡಳಿಯ ಯೋಗ ತರಗತಿಗೆ ಚಾಲನೆ

ಕಾರ್ಕಳ: ಮಹಿಳೆ ಸ್ವಾವಲಂಬಿಯಾಗಿ ಬದುಕಬೇಕೆಂಬ ಉದ್ದೇಶದಿಂದ ಯೋಗವನ್ನು ಕರಗತಮಾಡಿಕೊಂಡು ಹಲವಾರು ಜನರಿಗೆ ಮಾದರಿಯಾಗಬೇಕೆಂಬ ಧ್ಯೇಯದೊಂದಿಗೆ ಮಾಳದಲ್ಲಿ ಸೋಮವಾರ ಯೋಗ ತರಗತಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ರಮಿತಾ ಶೈಲೇಂದ್ರ ಮಾತನಾಡಿ, ಮಹಿಳೆ ನಾಲ್ಕುಗೋಡೆಯ ಬಂಧಿಯಾಗದೆ ತನಗೆ ತಿಳಿದಿರುವ ವಿದ್ಯೆಯನ್ನು ನಾಲ್ಕು ಜನರಿಗೆ ತಿಳಿಸುವ ಮಾತೆ ಯಾಗಬೇಕು. ನಿರಂತರ ಯೋಗದಿಂದ ಆರೋಗ್ಯವಂತರಾಗಿ ಇರಬಹುದು ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ಯೋಗಗುರು ಕೃಷ್ಣ ದಾಸ್ ಮಾತನಾಡಿ, ಪ್ರತಿದಿನ ಯೋಗಾಸನ ಮಾಡುವುದರಿಂದ ಶತಾಯುಷಿಗಳಾಗಿ ಬದುಕಬಹುದು ಎಂದರು.

ಪ್ರಮೀಳಾ ಡಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನಲ್ಲೂರು ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು, ಯೋಗ ಶಿಕ್ಷಕಿ ಜಯಂತಿ ಉಪಸ್ಥಿತರಿದ್ದರು. ಶೇಖರ್ ಶೆಟ್ಟಿ ಸ್ವಾಗತಿಸಿದರು. ಅವಿನಾಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.