ಉಡುಪಿ: ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಉಡುಪಿ ಮತ್ತು ಇಂಡಿಯನ್ ಸೀನಿಯರ್ ಚೇಂಬರ್ ಮಣಿಪಾಲ ಘಟಕದ ವತಿಯಿಂದ ಸೈಂಟ್ ಸಿಸಿಲಿ ಕನ್ನಡ ಮಾಧ್ಯಮ ಶಾಲೆಗೆ ಕುಡಿಯುವ ಶುದ್ಧ ನೀರಿನ ಘಟಕವನ್ನು ಆಗಸ್ಟ್ 5 ರಂದು ನೀಡಲಾಯಿತು.
ತಮ್ಮ ಸಹೋದರಿ ದಿ. ಶ್ರೀಮತಿ ಗುಲಾಬಿ.ಬಿ.ಪೂಜಾರಿ ಇವರ ಸ್ಮರಣಾರ್ಥ ರಾಮ ಪೂಜಾರಿ ಹಾವಂಜೆಯವರು ನೀರಿನ ಘಟಕವನ್ನು ಶಾಲೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸೀನಿಯರ್ ಚೇಂಬರ್ ನ ಚಿತ್ರಕುಮಾರ್, ಬಿಂದು, ಕೇರಳ ಕಲ್ಚರಲ್ ಸೊಸೈಟಿಯ ಅಧ್ಯಕ್ಷೆ ಶೈನಿ, ಸದಸ್ಯರಾದ ಬಿ ಎನ್ ಯೂಸುಫ್, ಸುರೇಶ್ ಶೇರಿಗಾರ್, ಕಾರ್ಯದರ್ಶಿ ಪುರುಷೋತ್ತಮ ಭಟ್, ಮಿಥುನ್ ಕುಮಾರ್, ಶ್ರೀಮತಿ ಶಮ ಉಸ್ಮಾನ್, ಎಸ್.ಸಿ.ಐ ಮಣಿಪಾಲ ಲೇಜಿನ್ ಅಧ್ಯಕ್ಷ ಚಂದ್ರ .ಬಿ.ಅಮೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಉಡುಪಿ ಜಿಲ್ಲಾ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಇದರ ಅಧ್ಯಕ್ಷೆ, ಎಸ್.ಸಿ.ಐ ಮಣಿಪಾಲ ಲೆಜಿನ್ ನ ಸ್ಥಾಪಕಾಧ್ಯಕ್ಷೆ ಅಡ್ವೋಕೋಟ್ ಪ್ರೀತಿ ಕುಂದಾಪುರ ವಹಿಸಿದ್ದರು.