ಮಹಿಳೆಯರು ಮನಸ್ಸು ಮಾಡಿದರೆ ಜಗವನ್ನೇ ಗೆಲ್ಲಲು ಸಾಧ್ಯ. ಮಹಿಳೆಗೆ ಹಲವಾರು ಕೆಲಸಗಳನ್ನು ಒಂದೇ ಸಲ ಮಾಡುವ ಸಾಮರ್ಥ್ಯ ಇದೆ. ಕುಟುಂಬದ ಯೋಗಕ್ಷೇಮ ಹಾಗೂ ಕೆಲಸವನ್ನು ಏಕಕಾಲಕ್ಕೆ ಮಾಡಲು ಮಹಿಳೆಗೆ ಸಾಧ್ಯ, ಈ ನಡುವೆಯೂ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎನ್ನುವವರಿಗೆ ಸೂಕ್ತ ವೇದಿಕೆ ಹಾಗು ಅಂತಹ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೀಗ ಕರಾವಳಿಯಲ್ಲೇ ಪ್ರಪ್ರಥಮ ಭಾರಿಗೆ ಮ್ಯೂಸಿಷಿಯನ್, ಡ್ಯಾನ್ಸರ್ಸ್, ಸಿಂಗರ್ಸ್, ರಾಪ್ಪೆರ್ಸ್, ಆಕ್ಟರ್ಸ್, ಆರ್ಟಿಸ್ಟ್, ಕಾಮೆಡಿಯನ್ಸ್, ಮ್ಯಾಜಿಷಿಯನ್ಸ್, ಇತ್ಯಾದಿ ವಿಶೇಷ ಪ್ರತಿಭೆಯ ಯುವತಿಯರಿಗೆ ಆರ್ಟಿಸ್ತ್ರೀ; 2019 ಉತ್ತಮ ವೇದಿಕೆ ಕಲ್ಪಿಸುತ್ತಿದೆ. ಈ ಕಾರ್ಯಕ್ರಮ ಇದೇ ಜೂನ್ ತಿಂಗಳಿನಲ್ಲಿ ಶುರುವಾಗಿದೆ ಎಂದು ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಪೃಥ್ವಿ ಗಣೇಶ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಣಿ ಮತ್ತು ವಿಚಾರಣೆಗಾಗಿ ಸಂಪರ್ಕಿಸಿ
8884410414/8884409014