ಉಡುಪಿ: ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮುಂದಿನ 5 ವರ್ಷಗಳ ಅವಧಿಗೆ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ಕೆ. ನಾಗೇಶ್ ಭಟ್ ಹಾಗೂ ಸಂಘದ ನಿರ್ದೇಶಕರಾಗಿ ಹರೀಶ್ ಹೆಗ್ಡೆ, ಲಕ್ಷ್ಮಣ್ ಜಿ. ನಾಯಕ್, ವಿಠಲ ಎಂ.ಪೈ, ಬಿ. ಅಶೋಕ್ ಪೈ, ಸುನೀಲ್ ಕುಮಾರ್ ಶೆಟ್ಟಿ, ಶಿವಪ್ರಸಾದ್ ಎಸ್. ಶೆಟ್ಟಿ, ಸುಧೀರ್, ಗಿರಿಜಾ ಎಸ್. ಶೆಟ್ಟಿ, ಪ್ರಫುಲ್ಲಾ ಎಚ್. ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ.